Posts

Showing posts from June, 2017

‘‘ನಾಟ್ ಇನ್ ಮೈ ನೇಮ್’’

Image
ಭಾರತದ ಹೆಮ್ಮೆಯ ಪ್ರಜೆಯಾಗಿ, ಸಕ್ರಿಯ ಅಥವಾ ನಿಷ್ರ್ಕೀಯವಾಗಿ ಹತ್ಯೆಯನ್ನು ಬೆಂಬಲಿಸುವ ಯಾರ ಅಭಿಪ್ರಾಯವನ್ನೂ ನಾನು ಅನುಮೋದಿಸುವುದಿಲ್ಲ. ನನ್ನ ನಿಷ್ಠೆ ಇರುವುದು ಭಾರತದ ಸಂವಿಧಾನಕ್ಕೆ. ಸರಕಾರ ಅಥವಾ ಇತರ ಯಾವುದೇ ಸಂಘ ಸಂಸ್ಥೆ ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲತತ್ವವನ್ನು ಕಡೆಗಣಿಸಿದರೆ, ಅದನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಕ್ರೂರ ವ್ಯಕ್ತಿಗಳ ಗುಂಪು ಜುನೈದ್ ಅವರನ್ನು ಹತ್ಯೆ ಮಾಡಿದೆ. ಹಂತಕರು ಯಾವ ಧರ್ಮಕ್ಕೆ ಸೇರಿದ್ದರೂ ನಾನು ಲೆಕ್ಕಿಸುವುದಿಲ್ಲ. ಜುನೈದ್ ಯಾವ ಧರ್ಮಕ್ಕೆ ಸೇರಿದವ ಎನ್ನುವುದೂ ನನಗೆ ಮುಖ್ಯವಲ್ಲ. ಒಂದು ಅಂಶದ ಬಗ್ಗೆ ಮಾತ್ರ ನನ್ನ ಕಳಕಳಿ. ತೀರಾ ಸಂಕುಚಿತ, ಕ್ರೂರ ಮನುಷ್ಯರ ಒಂದು ಗುಂಪು ಹದಿಹರೆಯದ ವ್ಯಕ್ತಿಯನ್ನು ಹತ್ಯೆ ಮಾಡಿ, ಇತರ ಮೂವರು ಯುವಕರ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದೆ! ಜುನೈದ್‌ಗೆ 16 ವರ್ಷ. ಜುನೈದ್ ತಾಯಿಗಾಗಿ ನನ್ನ ಹೃದಯ ಒಡೆಯುತ್ತದೆ. ಆ ಕ್ರೂರ ಮನುಷ್ಯರ ಗುಂಪು ಜುನೈದ್‌ನನ್ನು ಹತ್ಯೆ ಮಾಡಿರುವುದು ಮಾತ್ರವಲ್ಲ, ಮತ್ತೊಂದು ಕ್ರೂರಿಗಳ ಗುಂಪು ಅವರನ್ನು ಪ್ರಚೋದಿಸಿದೆ. ಆ ಮತಿಗೇಡಿ ಕೃತ್ಯಕ್ಕೆ ಸಾಕ್ಷಿಯಾಗಿಯೂ ಮೌನವಾಗಿ ಉಳಿದ ಕ್ರೂರಿಗಳ ಗುಂಪು ಕೂಡಾ ಜುನೈದ್ ಹತ್ಯೆಯಲ್ಲಿ ಶಾಮೀಲಾಗಿದೆ. ಮತ್ತೆ ಕೆಲ ಕ್ರೂರ ವ್ಯಕ್ತಿಗಳು ಈ ಹತ್ಯೆಯನ್ನು ಸಮರ್ಥಿಸುತ್ತಿದ್ದಾರೆ. ಹೌದು! ದ್ವೇಷ ಎಲ್ಲ ಬಗೆಯ ಸಮರ್ಥನೆಗೂ ಅವಕಾಶ ಕೊಡುತ್ತದೆ. ಹತ್ಯೆಯ ಸುದೀರ್ಘ ಪಟ್ಟಿಯೇ ಇದೆ. ಅದು...

ಪೇಜಾವರ ಶ್ರೀಗಳಿಗೆ ಕಾಂಗ್ರೆಸ್ ಬೆಂಬಲ: ಜಿ.ಪರಮೇಶ್ವರ್

Image
ಉಡುಪಿಯ ಶ್ರೀಕೃಷ್ಣಮಠದಲ್ಲಿ ಮುಸ್ಲಿಂ ಸಮುದಾಯದವರಿಗೆ ಇಫ್ತಾರ್‌ಕೂಟ ಏರ್ಪಡಿಸಿರುವ ಪೇಜಾವರ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.   ಕೋಮುಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಶ್ರೀಗಳು ಮಠಧಲ್ಲಿ ಇಫ್ತಾರ್‌ಕೂಟ ಏರ್ಪಡಿಸಿರುವುದಕ್ಕೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡಿದೆ ಎಂದು ತಿಳಿಸಿದ್ದಾರೆ.   ಸಮುದಾಯಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಸಲು ಕೋಮುವಾದಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಕೋಮುಸೌಹಾರ್ದತೆಯನ್ನು ಕಾಪಾಡುವಲ್ಲಿ ಶ್ರೀಗಳು ಶ್ರಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.   ಪೇಜಾವರ ಶ್ರೀಗಳ ವಿರುದ್ಧ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.  

ಮೋದಿಯ ಸ್ವಚ್ಚ ಭಾರತ ಅಭಿಯಾನಕ್ಕೆ ತನ್ನದೆ ಮಂತ್ರಿಯಿಂದ ಮೂತ್ರದ ಕೊಡುಗೆ

Image
ನವದೆಹಲಿ, ಜೂ.30-ಸ್ವಚ್ಚ ಭಾರತ ಅಭಿಯಾನದ ಅಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಒಂದೆಡೆ ದೇಶಾದ್ಯಂತ ಪ್ರಚಾರ ಮಾಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಪುಟದ ಹಿರಿಯ ಸಚಿವರೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಮೂತ್ರವಿಸರ್ಜನೆ ಮಾಡಿ ಕ್ಲೀನ್ ಇಂಡಿಯಾ ಆಂದೋಲನವನ್ನು ನಗೆಪಾಟಲಿಗೆ ಗುರಿ ಮಾಡಿದ್ದಾರೆ.   ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಮ್ಮ ಸಿಬ್ಬಂದಿಗಳ ಉಪಸ್ಥಿತಿ ಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದಾರೆ. ಸಚಿವರು ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಹಾಗೂ ಅಂಗರಕ್ಷಕರು ಸಿಂಗ್ ಅವರ ಸುತ್ತ ನಿಂತಿರುವುದು ಚಿತ್ರದಲ್ಲಿ ಗೋಚರಿಸುತ್ತಿದೆ. ಮಂತ್ರಿಮಹೋದಯರ ಕಾರು ಸಹ ಹತ್ತಿರದಲ್ಲಿದೆ. ಕೇಂದ್ರ ಸಚಿವರು ಅನಾಗರಿಕರಂತೆ ಯಾವ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.  ರಾಧಾ ಸಿಂಗ್ ಅವರ ಮೂತ್ರ ವಿಸರ್ಜನೆಯ ಚಿತ್ರಗಳು ಸಾರ್ವಜನಿಕವಾಗಿ ವ್ಯಾಪಕ ಟೀಕೆ ಮತ್ತು ಗೇಲಿಗೆ ಒಳಗಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಮೋದಿ, ಸಚಿವರು ಮತ್ತು ಸರ್ಕಾರದ ಸ್ವಚ್ಚ ಭಾರತ ಅಭಿಯಾನವನ್ನು ಲೇವಡಿ ಮಾಡಲಾಗುತ್ತಿದೆ. ಸ್ವಚ್ಚ ಭಾರತ ಅಭಿಯಾನದ ಅಡಿ ಮೋದಿ ಸರ್ಕಾರ ದೇಶಾದ್ಯಂತ ಕೋಟಿಗಟ್ಟಲೇ ಹಣ ಸುರಿದು ಶೌಚಾಲಯಗಳನ್ನು ನಿರ್ಮಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್...

ಎಐಸಿಸಿಯ ಕಾರ್ಯದರ್ಶಿ ಪಿ.ಸಿ ವಿಷ್ನುನಾತ್ ಜೊತೆ ಲುಕ್ಮಾನ್

Image
ಮಂಗಳೂರು : ನಾಲ್ಕು ವರುಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕಾಂಗ್ರೆಸ್ ಸರಕಾರವು ಜನಸ್ನೇಹಿಯಾಗಿ ಐದನೇ ವರುಷಕ್ಕೆ ದಾಪುಗಾಲಿಡುತ್ತಿದ್ದು ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಅಭೂತಪೂರ್ವ ಜನಮನ್ನನೆ ಪಡೆಯುತ್ತಿದ್ದು ಇದರಿಂದಾಗಿ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುಣಾವಣೆಗೆ ಪೂರ್ವಭಾವಿಯಾಗಿ ಈಗಾಗಲೆ ಚುಣಾವಣ ತಯಾರಿ ಆರಂಭಿಸಿದ್ದು ಇದರ ಅಂಗವಾಗಿ ದ.ಕ ಜಿಲ್ಲೆಯಲ್ಲಿ ವೃತ್ತಿಪರ ಘಟಕವನ್ನು ಆರಂಭಿಸಿದೆ. ಇದರ ಉದ್ಗಾಟನೆಯನ್ನು ಎಐಸಿಸಿಯ ಕಾರ್ಯದರ್ಶಿಯಾದ ಪಿ.ಸಿ ವಿಷ್ನುನಾತ್ ನೆರವೇರಿಸಿ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ತರ ಪಾಲುದಾರಿಕೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರಿಗೆ ಮಾಹಿತಿಗಳನ್ನು ನೀಡಿದರು. ದ.ಕ ಜಿಲ್ಲಾ ವೃತ್ತಿಪರ ಘಟಕದ ಅಧ್ಯಕ್ಷರಾಗಿ ನಿತಿನ್ ರೈ ಮತ್ತು ಉಪಾಧ್ಯಕ್ಷರನ್ನಾಗಿ ದ.ಕ ಜಿಲ್ಲಾ ಕಾಂಗ್ರೆಸ್ ಮಾನವ ಹಕ್ಕು ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ದಿನಕರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿರುವ ಲುಕ್ಮಾನ್ ರವರು ಪಿ.ಸಿ ವಿಷ್ನುನಾತ್ ರವರನ್ನು ಭೇಟಿಮಾಡಿ ಮಾತುಕಥೆ ನಡೆಸಿದರು. ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಮಾನವ ಹಕ್ಕು ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ದಿನಕರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಿಪಲ್ ರಾಜ್, ನವೀದ್ ಅಖ್ತರ್,ಮೂಡ...

ಈದ್ ಹಬ್ಬದ ಮುಖಾಂತರ ಸೌಹಾರ್ದ ಬೆಳೆಯಲಿ : ಲುಕ್ಮಾನ್

Image
ಮಂಗಳೂರು : ಪವಿತ್ರ ರಂಝಾನ್ ತಿಂಗಳಲ್ಲಿ ಒಂದು ತಿಂಗಳು ಉಪವಾಸ ವೃತವನ್ನು ಆಚರಿಸಿ ಇಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿರುವ ಸರ್ವ ಮುಸ್ಲಿಂ ಬಾಂಧವರಿಗೆ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಲುಕ್ಮಾನ್ ರವರು ಶುಭ ಹಾರೈಯಿಸಿದ್ದಾರೆ ಈ ಹಬ್ಬದ ಮುಖಾಂತರ ನಾಡಿನಾದ್ಯಂತ ಎಲ್ಲಾ ಜಾತಿ ಮತ್ತು ಧರ್ಮಗಳ ಅನುಯಾಯಿಗಳಲ್ಲಿ ಸುಖ,ಸಂತೋಷ,ಐಕ್ಯತೆ ಮತ್ತು ಸೌಹಾರ್ದತೆ ಬೆಳೆಯಲಿ ಎಂದು ಲುಕ್ಮಾನ್ ಆಶಿಸಿದರು.

TEAM RDX ವತಿಯಿಂದ ಇಫ್ತಾರ್ ಕೂಟ

Image
ಮಂಗಳೂರು : ಮಂಗಳೂರಿನ ಪ್ರಖ್ಯಾತ TEAM RDX ವತಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಸಾದುದ್ದೀನ್ ರವರ ನೇತೃತ್ವದಲ್ಲಿ ಬೋಳಾರ್ ಶಾದಿ ಮಹಲಿನಲ್ಲಿ ಇಫ್ತಾರ್ ಕೂಟದಲ್ಲಿ ಆಯೋಜಿಸಲಾಗಿತ್ತು. ಸಂಜೆ ನಡೆದಂತಹ ಇಫ್ತಾರ್ ಕೂಟದ ಮುಖ್ಯ ಅಥಿತಿಗಳಾಗಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಲುಕ್ಮಾನ್, ಮಾನವ ಹಕ್ಕು ಆಯೋಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ದಿನಕರ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಶಿಪಲ್ ರಾಜ್,  ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ  ಕಾಂಗ್ರೆಸ್ ಅಧ್ಯಕ್ಷರಾಗಿರುವ ರವೂಫ್ ಸಿ.ಎಂ, ಮಂಗಳೂರು ದಕ್ಷಿಣ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಶೈಲೇಶ್ ಕೊಟ್ಟಾರಿ, ಮಂಗಳೂರು ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಕಾರ್ತಿಕ್ ರಾಜ್,ಜಿಲ್ಲಾ ಕಾರ್ಯದರ್ಶಿಯಾಗಿರುವ ಸೌಹಾನ್, ಮುನಾವರ್ ಪಡಿಲ್, ಶಾಫಿ ಕೈಕಂಬ, ನ್ಯೂಸ್ ಹಂಟ್ನ ಮನ್ಸೂರ್ ಮತ್ತು TEAM RDX ನ ಸರ್ವ ಸದಸ್ಯರು ಮತ್ತು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮವರೇ ನಮ್ಮನ್ನು ಲೂಟಿ ಮಾಡಿದ್ರು : ಹಾರ್ದಿಕ್ ಪಾಂಡ್ಯ

Image
ಲಂಡನ್:  ಓವಲ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ಕಾರಣಗಳ ಕುರಿತು ಭಾರೀ ಚರ್ಚೆಯೇ ನಡೆದಿದೆ. ಕಾರಣ ಏನೆಂಬುದನ್ನು ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಪಾಂಡ್ಯ 43 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ರವೀಂದ್ರ ಜಡೇಜ ಜೊತೆಗೂಡಿ ಆಟವಾಡುವಾಗ ಪಾಂಡ್ಯ ರನ್ ಔಟ್ ಆಗಿದ್ದರು. ಅವರು ಔಟಾಗಿ ಬಂದ ಬಳಿಕ ಟ್ವಿಟರ್ ನಲ್ಲಿ ಸೋಲಿಗೆ ಕಾರಣ ನಮ್ಮವರೇ ಎಂದು ಹೇಳಿದ್ದಾರೆ. ನಮ್ಮವರೇ ನಮ್ಮನ್ನು ಲೂಟಿ ಮಾಡಿದ್ರು ಎಂದು ಪಾಂಡ್ಯ ಟ್ವೀಟ್ ಮಾಡಿದ್ದು, ಇದು ವಿವಾದ ಪಡೆದುಕೊಂಡಿದೆ. ಕೂಡಲೇ ಪಾಂಡ್ಯ ಟ್ವೀಟ್ ಡಿಲೀಟ್ ಮಾಡಿದ್ದಾರೆ. ‘ಪಾಕ್ ಎದುರು ಸೋಲಿನ ಕುರಿತಾಗಿ ಪಾಂಡ್ಯ ಹೇಳಿದ ಮಾತು ಇದಾಗಿದೆ. ನಮ್ಮವರೇ ಸೋಲಿಗೆ ಕಾರಣ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಾಂಡ್ಯ ಟ್ವೀಟ್ ರೀ ಟ್ವೀಟ್ ಆಗಿ ವೈರಲ್ ಆಗಿದೆ.

ರೈತರ ಸಾಲಮನ್ನಾ ಮಾಡಿದ ಪಂಜಾಬ್ ಕಾಂಗ್ರೆಸ್ ಸರಕಾರ

Image
ಚಂಡಿಗಢ:  ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸಣ್ಣ ಮತ್ತು ಮಧ್ಯಮ ವರ್ಗದ ( (5 ಎಕರೆ ವರೆಗೆ) ರೈತರಿಗೆ ರೂ.2 ಲಕ್ಷದ ವರೆಗೆ ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಿದ್ದಾರೆ. ಸಾಲದ ಮೊತ್ತದ ಲೆಕ್ಕಕ್ಕೆ ಹೊರತಾಗಿ ಇತರೆ ಎಲ್ಲ ಮಧ್ಯಮ ವರ್ಗದ ರೈತರಿಗೆ ರೂ.2 ಲಕ್ಷ ಪರಿಹಾರ ಘೋಷಿಸಿದ್ದಾರೆ. ರೈತರ ಸಾಲಮನ್ನಾ ಮಾಡುತ್ತಿರುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ ಅವರು ತಮ್ಮ ಈ ನಿರ್ಧಾರದಿಂದ ಪಂಜಾಬ್‍ನ 5 ಎಕರೆ ಜಮೀನುಳ್ಳ 8.75 ಲಕ್ಷ ರೈತರು ಸೇರಿದಂತೆ 10.25 ಲಕ್ಷ ರೈತರಿಗೆ ಲಾಭವಾಗಲಿದೆ ಎಂದಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರగಳು ಘೋಷಿಸಿದ ಪರಿಹಾರ ಮೊತ್ತಕ್ಕಿಂತలూ ಇದು ದುಪ್ಪಟ್ಟು ಎಂದಿದ್ದಾರೆ ಅಮರಿಂದರ್. ತಮ್ಮ ಈ ನಿರ್ಧಾರವು ಖ್ಯಾತ ಆರ್ಥಶಾಸ್ತ್ರಜ್ಞ ಟಿ.ಹಕ್ ಅವರ 'ಎಕ್ಸ್‌ಪರ್ಟ್ ಗ್ರೂಪ್'ನ ಮಧ್ಯಂತರ ವರದಿಯನ್ನು ಆಧರಿಸಿದೆ ಎಂದಿದ್ದಾರೆ ಅಮರಿಂದರ್ ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರೂ.3ಲಕ್ಷಕ್ಕೆ ಬದಲಾಗಿ ರೂ.5 ಲಕ್ಷ ಪರಿಹಾರ ಧನ ನೀಡುವುದಾಗಿಯೂ ಘೋಷಿಸಿದ್ದಾರೆ. ರೈತರ ಸಾಲಮನ್ನಾ ಹಣವನ್ನು ಸಾಂಸ್ಥಿಕ ಸಂಪನ್ಮೂಲಗಳಿಂದ ಭರಿಸಲಾಗುತ್ತದೆ ಎಂದಿದ್ದಾರೆ. ಪಂಜಾಬ್‌ನಲ್ಲಿ 18.5 ಲಕ್ಷ ಮಂದಿ ರೈತ ಕುಟುಂಬಗಳಿದ್ದು, ಅವರಲ್ಲಿ ಶೇ.65ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು. ಇವರಲ್ಲಿ ಶೇ.70ರಷ್ಟು ಮಂದಿಗೆ ಸಾಂಸ್ಥಿಕ ಸಂಪನ...

ನಮ್ಮ ಮೆಟ್ರೋ ಫೇಸ್-1 ಲೋಕಾರ್ಪಣೆಗೊಳಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Image
ಬೆಂಗಳೂರು:  ಪೂರ್ಣ ಪ್ರಮಾಣದ ನಮ್ಮ ಮೆಟ್ರೋ ಮೊದಲ ಹಂತವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಲೋಕಾರ್ಪಣೆಗೊಳಿಸಿದರು. ವಿಧಾನಸೌಧದ ಆವರಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಮ್ಮ ಮೆಟ್ರೋಗೆ ಪ್ರಣಬ್ ಮುಖರ್ಜಿ ಅವರು ಚಾಲನೆ ನೀಡಿದರು. ಪ್ರಣಬ್ ಮುಖರ್ಜಿ ಅವರು ಚಾಲನೆ ನೀಡುತ್ತಿದ್ದಂತೆ ಸಂಪಿಗೆ ರಸ್ತೆ ಮತ್ತು ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದಿಂದ ಮೆಟ್ರೋ ರೈಲು ಸಂಚಾರ ಆರಂಭಿಸಿದವು.  ಚಾಲನೆ ಹಿನ್ನಲೆ ವಿಧಾನಸೌಧದ ಅವರಣದಲ್ಲಿ ಸುಮಾರು 2 ಸಾವಿರ ಮಂದಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಇನ್ನು ಪ್ರಣಬ್ ಮುಖರ್ಜಿ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯನಾಯ್ಡು, ರಾಜ್ಯ ಸಚಿವ ಕೆಜೆ ಜಾರ್ಜ್ ಉಪಸ್ಥಿತರಿದ್ದರು. ಇದೀಗ ಎಲ್ಲಾ ಭಾಗಗಳಿಂದಲೂ ಸಂಪರ್ಕ ಕಲ್ಪಿಸುವ ಕೆಂಪೇಗೌಡ ಮೆಟ್ರೋ ನಿಲ್ದಾಣ ಭಾರತದ ಅತಿ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ .

ಶಿಪಲ್ ರಾಜ್ ರವರಿಗೆ ಶಾಸಕರಾದ ಮೊಹಿಯುದ್ದೀನ್ ಬಾವರಿಂದ ಸನ್ಮಾನ

Image
ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎ ಮೊಹಿಯುದ್ದೀನ್ ಬಾವ ರವರ ನೇತೃತ್ವದಲ್ಲಿ ಕೈಕಂಬದ ಮೆಗಾ ಪ್ಲಾಝ ಹಾಲ್ ನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಇತ್ತಿಚೆಗೆ ನಡೆದ ಯುವ ಕಾಂಗ್ರೆಸ್ ಚುಣಾವಣೆಯಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಶಿಪಲ್ ರಾಜ್ ರವರನ್ನು ಶಾಸಕರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಉಪಸ್ಥಿತರಿದ್ದರು.

ಮೊಹಿಯುದ್ದೀನ್ ಬಾವರವರಿಂದ ಯುವನಾಯಕರಿಗೆ ಸನ್ಮಾನ

Image
ಕೈಕಂಬ : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎ ಮೊಹಿಯುದ್ದೀನ್ ಬಾವ ರವರ ನೇತೃತ್ವದಲ್ಲಿ ಕೈಕಂಬದ ಮೆಗಾ ಪ್ಲಾಝ ಹಾಲ್ ನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಮಧ್ಯಾನ್ಹ ಎರಡು ಗಂಟೆಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ  ಸಭಾ ಕಾರ್ಯಕ್ರಮಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಇದೇ ಸಂಧರ್ಭದಲ್ಲಿ ಇತ್ತಿಚೆಗೆ ನಡೆದ  ಯುವ ಕಾಂಗ್ರೆಸ್ ಚುಣಾವಣೆಯಲ್ಲಿ   ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸುಹೈಲ್ ಕಂದಕ್ ರವರನ್ನು, ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿರುವ ಸುಹೈಬ್, ನವೀದ್ ಅಖ್ತರ್,  ಶಿಪಾಲ್ ರಾಜ್, ವರುಣ್ ರಾಜ್ ರವರನ್ನು ಮತ್ತು ಮಂಗಳೂರು ಉತ್ತರ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗಿರೀಶ್ ಆಳ್ವ ಹಾಗು ಪದಾಧಿಕಾರಿಗಳಾದ ಕಾರ್ತಿಕ್ ರಾಜ್ ಮತ್ತು ಜೈಸನ್‌ರವರನ್ನು ಶಾಸಕರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಉಪಸ್ಥಿತರಿದ್ದರು.

ಆಯಾ ದಿನದ ಪೆಟ್ರೋಲ್ ಬೆಲೆ ತಿಳಿದುಕೊಳ್ಳುವುದು ಹೇಗೆ?

Image
ಹೊಸದಿಲ್ಲಿ:  ಇಂದಿನಿಂದ (ಜೂ.6) ಪೆಟ್ರೋಲ್, ಡೀಸೆಲ್ ಬೆಲೆ ನಿತ್ಯ ಬದಲಾಗುತ್ತಿರುತ್ತದೆ. ಬೆಳಗ್ಗೆ 6ರಿಂದ ಮರುದಿನ ಬೆಳಗ್ಗೆ 6ರವರೆಗೆ ಆ ದಿನದ ಬೆಲೆಗಳು ಜಾರಿಯಲ್ಲಿರುತ್ತವೆ. ಈ ಹಿಂದೆ ಆ ರೀತಿ ಇರಲಿಲ್ಲ. ಪ್ರತಿ ತಿಂಗಳು 1ನೇ ತಾರೀಖು ಮತ್ತು 16ರಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಳಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರವಾಗುತ್ತಿತ್ತು. ಈಗ ನಿತ್ಯ ಇಂಧನ ದರ ಬದಲಾಗುತ್ತಿರುತ್ತದೆ. ಪೆಟ್ರೋಲ್ ಬಂಕ್‌ಗೆ ಹೋಗುವ ಮುನ್ನ ಇಂದಿನ ಬೆಲೆಯನ್ನು ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿ ಕೆಲವು ಪದ್ಧತಿಗಳಿವೆ. ಆ್ಯಪ್‌ ಮೂಲಕ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ fueal@ioc-indialiol ಎಂಬ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡರೆ ಅದರಲ್ಲಿ ನೀವಿರುವ ಪ್ರದೇಶದ ಐದು ಕಿ.ಮೀ ವ್ಯಾಪ್ತಿಯೊಳಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲಿ ಆ ದಿನದ ಬೆಲೆ ಏನು ಎಂದು ತಿಳಿದುಕೊಳ್ಳಬಹುದು. ಇದೇ ತರಹ ಹೆಚ್‍ಪಿ myhpcl, ಭಾರತ್ ಪೆಟ್ರೋಲಿಯಂ ಕಂಪೆನಿಗಳ smartdrive ಎಂಬ ಆ್ಯಪ್‌ಗಳ ಮೂಲಕ ಆ ದಿನದ ಬೆಲೆ ತಿಳಿದುಕೊಳ್ಳಬಹುದು. ಎಸ್‍ಎಂಎಸ್ ಮೂಲಕ ಇಂಡಿಯನ್ ಆಯಿಲ್ ಕಂಪೆನಿ ಬಂಕ್‌ಗಳಲ್ಲಿ ಬೆಲೆ ತಿಳಿದುಕೊಳ್ಳಬೇಕೆಂದರೆ 92249 92249 ಎಂಬ ನಂಬರ್‌ಗೆ ರೀಟೈಲ್ ಸೇಲ್ ಪ್ರೈಸ್ - RSP(SPACE)DELERCODE ಮಾದರಿಯಲ್ಲಿ ಮೆಸೇಜ್ ಕಳುಹಿಸಬೇಕು. ಭಾರತ ಪೆಟ್ರೋಲಿಯಂ ಕಂಪೆನಿ ಬೆಲೆಗಾಗಿ 92231 12222, ಹೆಚ್‌ಪಿ ಕಂಪೆ...

ಹಸಿವು ಮುಕ್ತ ರಾಜ್ಯಕ್ಕಾಗಿ ಇಂದಿರಾ ಕ್ಯಾಂಟೀನ್, ಏನಿದರ ವಿಶೇಷ?

Image
ಬೆಂಗಳೂರು, ಜೂನ್ 14: ಲಕ್ಷಾಂತರ ಮಂದಿ ಹಸಿವು ನೀಗಿಸಲು ಬೆಂಗಳೂರಿನಲ್ಲಿ ರಿಯಾಯತಿ ದರದ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಬಜೆಟ್ ನಲ್ಲ್ ಘೋಷಿಸಿದಂತೆ, ಸಿದ್ದರಾಮಯ್ಯ ಸರ್ಕಾರ ತನ್ನ ಮಹತ್ವ ಯೋಜನೆಯನ್ನು ಸಾಕಾರಗೊಳಿಸುತ್ತಿದೆ. ನಮ್ಮ ಕ್ಯಾಂಟೀನ್ ಎಂಬ ಹೆಸರು ಬದಲಾಗಿ ಇಂದಿರಾ ಕ್ಯಾಂಟೀನ್ ಹೆಸರು ಬಂದಿದೆ. ಬೆಂಗಳೂರಿನ ಪ್ರತಿ ವಾರ್ಡಿನಲ್ಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಲಭ್ಯವಾಗಲಿದೆ. ಸರ್ಕಾರ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆ ಬರಗಾಲದಲ್ಲೂ ಜನರು ಹಸಿವಿನಿಂದ ನರಳದಂತೆ ಮಾಡಿದೆ. ಈಗ ಇದೇ ನಿಟ್ಟಿನಲ್ಲಿ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸರ್ಕಾರ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಪೂರೈಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದೆ. ಸರ್ಕಾರ ರಾಜ್ಯದ ಜನರನ್ನು ಹಸಿವು ಮುಕ್ತಗೊಳಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆ ಬರಗಾಲದಲ್ಲೂ ಜನರು ಹಸಿವಿನಿಂದ ನರಳದಂತೆ ಮಾಡಿದೆ. ಈಗ ಇದೇ ನಿಟ್ಟಿನಲ್ಲಿ ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಸರ್ಕಾರ ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ಪೂರೈಸುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಿದೆ. ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಯೋಜನೆ ಬೆಂಗಳೂರಿನಲ್ಲಿ ಅದರ ಯಶಸ್ಸು ಆ...

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

Image
ಮಂಗಳೂರು : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಶಿಪಾಲ್ ರಾಜ್ ಮಂಗಳೂರು ಇವರು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣ ಕಂಕನಾಡಿ ಬಳಿ ನಿರಾಶ್ರಿತ ಮಕ್ಕಳಿಗೆ ರಂಝಾನ್ ಪ್ರಯುಕ್ತ ತಿಂಡಿ ತಿನಿಸುಗಳನ್ನು ವಿತರಿಸುವುದರ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಶಿಪಾಲ್ ರಾಜ್ ಅವರೊಂದಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲೇಶ್ ಕೊಟ್ಟಾರಿ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಪೂಜಾರಿ ಉಪಸ್ಥಿತರಿದ್ದರು.

ರಕ್ತದಾನದ ಪ್ರಯೋಜನ ಏನು ಗೊತ್ತೇ?

Image
ರಕ್ತಕ್ಕೆ 'ರಕ್ತ'ವೇ ಪರಾರ‍ಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು. ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಕ್ತದಾನದಿಂದ ಆಗುವ ಉಪಯೋಗಗಳು, ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ ಎಂಬುದರ ಕುರಿತು ಒಂದಿಷ್ಟು ಮಾಹಿತಿ. ಯಾರು ರಕ್ತದಾನ ಮಾಡಬಹುದು? *18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ *ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 6 ತಿಂಗಳಿಗೊಮ್ಮೆ *ಪುರುಷರ ತೂಕ 45 ಕೆ.ಜಿ. ಹಾಗೂ ಮಹಿಳೆಯರ ತೂಕ 50 ಕೆ.ಜಿ. ಇರಬೇಕು. *ದಾನಿಗಳ ಸಿಸ್ಟಾಲಿಕ್‌ ರಕ್ತದ ಒತ್ತಡ 140 ಹಾಗೂ ಡಯಾಸ್ಟಾಲಿಕ್‌ ರಕ್ತದ ಒತ್ತಡ 70ರಿಂದ 100 ಇರಬೇಕು. *ರಕ್ತದಲ್ಲಿ ಹಿಮೋಗ್ಲೋಬಿನ್‌ ಅಂಶ 12.5ಕ್ಕಿಂತ ಹೆಚ್ಚಿರಬೇಕು. ಯಾರು ರಕ್ತದಾನ ಮಾಡುವಂತಿಲ್ಲ? *ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದರೆ *ಆಲ್ಕೋಹಾಲ್‌ ಅಥವಾ ಆ್ಯಂಟಿಬಯೋಟಿಕ್‌ಗಳನ್ನು ಸೇವಿಸಿದ 72 ಗಂಟೆಗಳವರೆಗೆ *ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್‌ ಮಾಡಿಸಿಕೊಂಡಿದ್ದವರು ನಾಲ್ಕು ವಾರದವರೆಗೆ *ಆಸ್ಪಿರಿನ್‌ ಮಾತ್ರೆ ಸೇವಿಸಿದ್ದರೆ, 3 ದಿನಗಳವರೆಗೆ ವೈದ್ಯೋಪಚಾರದಲ್ಲಿದ್ದರೆ, ಸ್ವತಃ ರಕ್ತಪಡ...

ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ರೆ 30 ಸಾವಿರ ಮಾಸಾಶನ ಕೊಡಿ!

Image
ನವದೆಹಲಿ: ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ವೃದ್ಧಾಶ್ರಮಕ್ಕೆ(ಪೋಷಕರನ್ನು ತೊರೆಯುವ) ಸೇರಿಸಲ್ಪಡುವ ಪೋಷಕರು ಅಥವಾ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಸಾಶನ ಕಾಯ್ದೆಗೆ ತಿದ್ದುಪಡಿ ತರುವ ಸಿದ್ಧತೆಯಲ್ಲಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಹಾಲಿ ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007ರ ಪ್ರಕಾರ ತಿಂಗಳಿಗೆ 10 ಸಾವಿರ ರೂ ಮಾಸಾಶನ ಎಂದು ನಿಗದಿಯಾಗಿದ್ದು, ಆದರೆ ಹೊಸ ತಿದ್ದುಪಡಿ ಕಾಯ್ಷೆ ಪ್ರಕಾರ ತಿಂಗಳಿಗೆ 25ಸಾವಿರದಿಂದ 30 ಸಾವಿರ ರೂಪಾಯಿ ಹಣವನ್ನು ಮಕ್ಕಳು ಪೋಷಕರ ಪಾಲನೆಗೆ ನೀಡಬೇಕಾಗುತ್ತದೆ ಎಂದು ವರದಿ ವಿವರಿಸಿದೆ. ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007ರ ಕಾಯ್ದೆಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ತಿದ್ದುಪಡಿ ಮಾಡುವ ಸಿದ್ಧತೆಯಲ್ಲಿದೆ. ಕಾಯ್ದೆಯನ್ವಯ ವೃದ್ಧಾಶ್ರಮದಲ್ಲಿರುವ ಹಿರಿಯ (60ವರ್ಷ ಮೇಲ್ಪಟ್ಟ) ನಾಗರಿಕರಿಗೆ ಅಥವಾ ಪೋಷಕರಿಗೆ ಮಕ್ಕಳು ತಿಂಗಳಿಗೆ ನೀಡಲಿರುವ ಮಾಸಾಶನ ಹೆಚ್ಚಳವಾಗಲಿದೆ. ಸಾಮಾಜಿಕ ನ್ಯಾಯ ಸಚಿವಾಲಯದ ಕಾರ್ಯದರ್ಶಿ ಲತಾ ಕೃಷ್ಣರಾವ್‌ ಅವರು, ಬಹುತೇಕರ ಆದಾಯ ತಮ್ಮ ಪೋಷಕರಿಗೆ ಹತ್ತು ಸಾವಿರಕ್ಕಿಂತ ಹೆಚ್ಚು ನೀಡಲು ಸಾಕಾಗುತ್ತದೆ. ಹಾಗಾಗಿ ಈಗಿರುವ ಮಿತಿಯನ್ನು ನಾವು ಯಾಕೆ ಹೆಚ್ಚಳ...

ಯಾರು ಯುದ್ದ ಬಯಸುತ್ತಾರೋ ಅವರನ್ನು ಗಡಿಗೆ ಕಳುಹಿಸಿ! ಸಲ್ಮಾನ್ ಖಾನ್

Image
ಮುಂಬಯಿ :  "ಯಾರು ಯುದ್ಧವನ್ನು ಬಯಸುತ್ತಾರೋ, ಯಾರು ಯುದ್ದಕ್ಕೆ ಆದೇಶ ನೀಡುತ್ತಾರೋ ಅವರನ್ನು, ಯುದ್ಧದಲ್ಲಿ ಹೋರಾಡಲು, ಸೈನಿಕರ ಬದಲು, ಮೊದಲು ಗಡಿಯತ್ತ ಕಳುಹಿಸಬೇಕು; ಆಗ ಮಾತ್ರವೇ ಅವರಿಗೆ ಯುದ್ಧ ಎಂದರೇನು, ಯುದ್ಧದಲ್ಲಿ ಹೋರಾಡುವುದೆಂದರೆ ಏನು ಎಂಬುದು ಚೆನ್ನಾಗಿ ಗೊತ್ತಾಗುತ್ತದೆ. ರಣರಂಗದಲ್ಲಿ  ಬಂದೂಕು ಹಿಡಿದು ನಿಂತಾಗ ಅವರ ಕೈಗಳು ನಡುಗಲು ಶುರುವಾಗುತ್ತವೆ; ಕಾಲುಗಳು ಕಂಪಿಸಲು ಶುರುವಾಗುತ್ತವೆ. ಯುದ್ದದ ಬದಲು ಶಾಂತಿ ಮಾತುಕತೆಯ ಮೂಲಕವೇ ಭಿನ್ನಮತವನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂಬ ಸತ್ಯ ಅವರಿಗೆ ಅರಿವಾಗುತ್ತದೆ. ದೇಶ-ದೇಶಗಳ ನಡುವಿನ ವಿವಾದ, ಭಿನ್ನಮತ ಬಗೆಹರಿಸಲು ಮಾತುಕತೆಯೊಂದೇ ಪರಿಹಾರ ಹೊರತು ಯುದ್ದ ಅಲ್ಲ'. ಈ ಮಾತುಗಳನ್ನು ಆಡಿದವರು ಯಾರು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಖುದ್ದಾಗಿ ಆಡಿರುವ ಮಾತುಗಳು ಇವು ! ಯುದ್ದಾಕಾಂಕ್ಷಿಗಳು, ಯುದ್ದಾಪೇಕ್ಷಿಗಳು ಮತ್ತು ಯುದ್ಧೋನ್ಮಾದ ಹೊಂದಿದವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಸಲ್ಮಾನ್‌ ನಿರ್ದಾಕ್ಷಿಣ್ಯವಾಗಿ ಈ ಮಾತುಗಳನ್ನು ಆಡಿದ್ದಾರೆ.  "ಯುದ್ದ ಎನ್ನುವುದು ಅತೀ ಕೆಟ್ಟದು; ಜಗತ್ತಿನಲ್ಲೇ ಯಾರನ್ನೇ ಕೇಳಿದರೂ ಅವರು ಯುದ್ದ ಅತ್ಯಂತ ಕೆಟ್ಟದ್ದು ಎನ್ನುತ್ತಾರೆ; ಆದರೂ ವಿಶ್ವಾದ್ಯಂತ ಯುದ್ದ...

ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಶುರು

Image
ನವದೆಹಲಿ:  ದೇಶದ ಹದಿಮೂರನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ  ಚುನಾವಣೆಗಾಗಿ  ಕೇಂದ್ರ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿತು. ಅಧಿಸೂಚನೆ ಹೊರಬಿದ್ದ ಕೆಲವೇ ತಾಸುಗಳಲ್ಲಿ ಮೂವರು ಹಿರಿಯ ಸಚಿವರನ್ನು ಒಳಗೊಂಡ ಬಿಜೆಪಿ ಉನ್ನತ ಸಮಿತಿಯು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು. ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿ ಯಾರೆಂದು ಬಿಜೆಪಿ ಮತ್ತು ಮಿತ್ರಪಕ್ಷಗಳು ವಾರದೊಪ್ಪತ್ತಿನಲ್ಲಿ ಸಾರಲಿವೆ. ಸರ್ಕಾರ ಇಳಿಸುವ ಹುರಿಯಾಳು ಯಾರೆಂದು ಕಾದು ನೋಡಿ ತಮ್ಮ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೇ ಬೇಡವೇ ಎಂದು ಪ್ರತಿಪಕ್ಷಗಳು ತೀರ್ಮಾನಿಸಲಿವೆ. ಪ್ರತಿಪಕ್ಷಗಳೂ ಒಪ್ಪಬಹುದಾದ ಅಭ್ಯರ್ಥಿಯನ್ನು ಹೂಡುವ ಸಂಬಂಧ ಬಿಜೆಪಿ ನೇಮಕ ಮಾಡಿರುವ ಉನ್ನತ ಸಮಿತಿಯ ಮೂವರು ಸದಸ್ಯರು ಮುಂಬರುವ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್, ವೆಂಕಯ್ಯನಾಯ್ಡು ಹಾಗೂ ಅರುಣ್ ಜೇಟ್ಲಿ ಉನ್ನತ ಸಮಿತಿಯ ಸದಸ್ಯರು. ಬಿಜೆಪಿ ಮಿತ್ರಪಕ್ಷಗಳಲ್ಲದೇ ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಮಾಯಾವತಿ ಅವರ ಬಿಎಸ್‌ಪಿ ಜೊತೆ ಈ ಸಮಿತಿ ಈಗಾಗಲೇ ಸಮಾಲೋಚನೆ ನಡೆಸಿ ಬೆಂಬಲ ಕೋರಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಐದು ವರ್ಷಗಳ ಅಧಿಕಾರಾವಧಿ ಮುಂಬರುವ ಜುಲೈ 2...

ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಬಾಂಗ್ಲಾದೇಶ ಸವಾಲು

Image
ಬರ್ಮಿಂಗ್‌ಹ್ಯಾಮ್‌:  ಭರವಸೆಯ ಅಲೆ ಯಲ್ಲಿ ತೇಲುತ್ತಿರುವ ಭಾರತ ಮತ್ತು ಇತಿಹಾಸ ನಿರ್ಮಿಸುವ ನಿರೀಕ್ಷೆಯಲ್ಲಿರುವ ಬಾಂಗ್ಲಾದೇಶ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿ ಫೈನಲ್‌ ಪಂದ್ಯದಲ್ಲಿ ಗುರುವಾರ ಸೆಣಸಲಿವೆ. ಉತ್ತಮ ಲಯದಲ್ಲಿರುವ ಬ್ಯಾಟ್ಸ್‌ ಮನ್‌ಗಳು, ಪಂದ್ಯಕ್ಕೆ ಯಾವುದೇ ಸಂದರ್ಭದಲ್ಲಿ ತಿರುವು ನೀಡಬಲ್ಲ ಬೌಲರ್‌ಗಳು ಮತ್ತು ಎದುರಾಳಿಗಳ ಧೃತಿಗೆಡಿಸಬಲ್ಲ ಫೀಲ್ಡಿಂಗ್‌ ಭಾರತದ ಭರವಸೆ ಹೆಚ್ಚಿಸಿದೆ. ನ್ಯೂಜಿಲೆಂಡ್‌ ವಿರುದ್ಧ ಅಮೋಘ ಜಯ ಸಾಧಿಸಿದ ನಂತರ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಬಾಂಗ್ಲಾದೇಶ ಫೈನಲ್ ಹಂತಕ್ಕೇರುವ ಕನಸು ಹೊತ್ತು ಎಜ್‌ಬಾಸ್ಟನ್‌ ಕ್ರೀಡಾಂಗಣಕ್ಕೆ ಇಳಿಯ ಲಿದೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯ. ಪಾಕಿಸ್ತಾನವನ್ನು ಆರಂಭಿಕ ಪಂದ್ಯದಲ್ಲಿ ಮಣಿಸಿ, ದಕ್ಷಿಣ ಆಫ್ರಿಕಾ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಭಾರತ ನಾಲ್ಕರ ಘಟ್ಟದ ಪಂದ್ಯದಲ್ಲಿ ಜಯ ಗಳಿಸುವ ನೆಚ್ಚಿನ ತಂಡ ಎಂಬುದು ಕ್ರಿಕೆಟ್ ಲೋಕದ ಲೆಕ್ಕಾಚಾರ. ಆದರೆ ಯಾವುದೇ ಕ್ಷಣದಲ್ಲಿ ಪುಟಿದೇಳುವ ಸಹಜ ಗುಣ ಇರುವ ಬಾಂಗ್ಲಾದೇಶವನ್ನು ವಿರಾಟ್ ಕೊಹ್ಲಿ ಬಳಗ ಲಘುವಾಗಿ ಪರಿಗಣಿಸುವಂತಿಲ್ಲ. 2007ರ ವಿಶ್ವಕಪ್‌ನ ಲೀಗ್‌ ಪಂದ್ಯದಲ್ಲಿ ಭಾರತ ವನ್ನು ಈ ತಂಡ ಐದು ವಿಕೆಟ್‌ಗಳಿಂದ ಸೋಲಿಸಿತ್ತು. ಇಂಥ ಅಚ್ಚರಿಯ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ತಂಡಕ್ಕೆ ಈಗಲೂ ಇದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನ್ಯ...

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

Image
ಉಪ್ಪಿನಂಗಡಿ: ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರು ನಿನ್ನೆ ಕುಂತೂರು ಜುಮಾ ಮಸೀದಿಯಲ್ಲಿ ಏರ್ಪಡಿಸಿದಂತಹ ಇಫ್ತಾರ್ ಕೂಟದಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಲುಕ್ಮಾನ್ ಮತ್ತು ನೂರಾರು ಉಪವಾಸಿಗರು ಪಾಳ್ಗೊಂಡಿದ್ದರು.     ಈ ಸಂಧರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಅಖ್ತರ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾದ ಶಾಫಿ, ಮುನಾವರ್, ಸಫ್ವಾನ್, ಶಾಫಿ ಕೈಕಂಬ, ನದೀಂ, ಆದಿಲ್ ಹಾಗೂ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ನ ಸಕ್ರೀಯ  ಕಾರ್ಯಕರ್ತರಾಗಿರುವ ಮುತ್ತಲಿ ಕುಂತೂರು, ನವಲ್ ಉಪ್ಪಿನಂಗಡಿ ಮತ್ತು ಚಮ್ಮಿ ಉಪ್ಪಿನಂಗಡಿ ಆಯೋಜಿಸಿದ್ದರು.

ಕಲ್ಲಡ್ಕದಲ್ಲಿ ಗಲಭೆಯಿಂದ ಪರಿಸ್ಥಿತಿ ಉದ್ವಿಗ್ನ: ನಾಲ್ಕು ತಾಲ್ಲೂಕುಗಳಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು:  ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದ ಗಲಭೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತ...

ಕೇಂದ್ರ ಸರ್ಕಾರ ಸುಳ್ಳನ್ನೇ ಸತ್ಯವನ್ನಾಗಿ ಬಿಂಬಿಸಿ ಎಲ್ಲರನ್ನೂ ಮೌನವಾಗಿಸಲು ಹೊರಟಿದೆ: ರಾಹುಲ್‌ ಗಾಂಧಿ

ಬೆಂಗಳೂರು:  " ಕೇಂದ್ರ ಸರ್ಕಾರ ಸುಳ್ಳು ಹೇಳುತ್ತ ನಡೆದಿದ್ದು, ಸದ್ಯ ಭಾರತದಲ್ಲಿ ಮೌನದಿಂದ ಸತ್ಯವನ್ನು  ಪಲ್ಲಟಗೊಳಿಸಲಾಗುತ್ತಿದೆ. ದೇಶದ ಜನರ ಮೌನ ಸುಳ್ಳಾಗಿ ಪರಿವರ್ತನೆಯಾಗುತ್ತಿದೆ' ಎಂದು ಎಐಸ...

ಚೆಕ್ ಬೌನ್ಸ್ ಆದರೆ ಹುಷಾರ್!: ಜಾಮೀನು ನೀಡದೆ ನಿಮ್ಮನ್ನು ಜೈಲಿಗಟ್ಟಬಹುದು

ನವದೆಹಲಿ :  ಬ್ಯಾಂಕಿನ ನಿಮ್ಮ  ಖಾತೆಯಲ್ಲಿ  ಸಾಕಷ್ಟು ಹಣವಿಲ್ಲದೆ ಚೆಕ್ ಬರೆದುಕೊಟ್ಟು ಅದು ಬೌನ್ಸ್ ಆದರೆ ನೀವು ಜೈಲಿನಲ್ಲಿ ಕಂಬಿ ಎಣಿಸಬೇಕಾಗಬಹುದು. ಈಗಿರುವ ಶಿಕ್ಷೆಯನ್ನು ತಿದ್ದುಪಡಿ ಮಾಡಲು ಹೊ...