Posts

Showing posts from July, 2017

ಕೆಪಿಸಿಸಿ ಪದಾಧಿಕಾರಿಗಳ ವಿವರ

Image
ಬೆಂಗಳೂರು:  ಪುನರ್‌ರಚನೆಗೊಂಡ ಕೆಪಿಸಿಸಿ ಪದಾಧಿಕಾರಿಗಳ ವಿವರ ಕೆಳಕಂಡಂತಿದೆ.    ಖಜಾಂಚಿ- ಕೃಷ್ಣಂ ರಾಮ, ಪ್ರಧಾನ ಕಾರ್ಯದರ್ಶಿಗಳು-  ವಿ.ಆರ್. ಸುದರ್ಶನ್, ಎಂ.ಎಸ್. ಆತ್ಮಾನಂದ, ಎಸ್‌.ಜಿ. ನಂಜಯ್ಯನಮಠ, ಅಲ್ಲಮಪ್ರಭು ಪಾಟೀಲ, ಕೆ.ಗೋವಿಂದರಾಜ್, ಬಿ.ಎ. ಹಸನಬ್ಬ, ಯು.ಆರ್. ಸಭಾಪತಿ, ಕೈಲಾಸನಾಥ ಪಾಟೀಲ್,ಜಿ.ಸಿ. ಚಂದ್ರಶೇಖರ್, ಎನ್.ಸಂಪಂಗಿ, ಮುಖ್ಯಮಂತ್ರಿ ಚಂದ್ರು, ಎನ್.ಎಲ್. ನರೇಂದ್ರಬಾಬು, ಆರ್.ವಿ. ವೆಂಕಟೇಶ್. ಜಲಜಾ ನಾಯಕ್, ಮಲ್ಲಾಜಮ್ಮ, ಗೋಪಾಲ ಭಂಡಾರಿ, ವೆಂಕಟರಾವ್ ಘೋರ್ಪಡೆ, ಸೈಫುಲ್ಲಾ, ಎ.ಜಯಸಿಂಹ, ಎ.ಸಿ. ಶ್ರೀನಿವಾಸ, ಕೆ.ವಿ. ಗೌತಮ್, ಚಲವಾದಿ ನಾರಾಯಣಸ್ವಾಮಿ, ಜಿ.ಎ. ಬಾವಾ, ಎಂ.ಸುರೇಶ್, ಗುರಪ್ಪ ನಾಯ್ಡು, ಎಂ.ಎ. ಗಫೂರ್, ಎಂ.ಸಿ. ವೇಣುಗೋಪಾಲ್, ನಿವೇದಿತ್ ಆಳ್ವ, ಒಬೇದುಲ್ಲ ಷರೀಫ್, ಎಸ್.ಎ. ಹುಸೇನ್, ಆರ್.ಮಂಜುನಾಥ, ಪಿ.ವಿ. ಮೋಹನ್, ಸತೀಶ್ ಮಲ್ಲಣ್ಣ, ಶಿವಣ್ಣ ಮಳವಳ್ಳಿ, ಸೈಯದ್ ಜಿಯಾವುಲ್ಲಾ, ವಿನಯ್ ಕಾರ್ತಿಕ್, ಯು.ಬಿ. ವೆಂಕಟೇಶ್, ವಸಂತಕುಮಾರ್, ವೆಂಕಟೇಶ್ವರ್, ಬಲ್ಕಿಶ್ ಬಾನು, ಚಂದ್ರಿಕಾ ಪರಮೇಶ್ವರಿ, ಮುಮ್ತಾಜ್ ಬೇಗಂ, ಆರ್.ಮಂಜುಳಾ ನಾಯ್ಡು, ರುಕ್ಮಿಣಿ ಸಾಹುಕಾರ್, ವಾಸಂತಿ ಶಿವಣ್ಣ, ಮಂಜುಳಾ ಕಾಳಮರಿಗೌಡ, ಎನ್.ಎಸ್. ರತ್ನಪ್ರಭಾ, ಚಂದ್ರಶೇಖರ ಭಟ್, ಎಂ.ಎಲ್. ಮೂರ್ತಿ, ಆಗಾ ಸುಲ್ತಾನ್, ಪಾರಸಮಲ್ ಜೈನ್, ಕೆ.ಎಂ. ಇಬ್ರಾಹಿಂ, ಬಿ.ಕೆ. ಶಿವರಾಂ, ಸಿ.ವಿ. ರಾಜಪ್ಪ, ಶಶಿ...

ರಾಜ್ಯದಲ್ಲಿ ಗೋಮಾಂಸದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದ ಬಿಜೆಪಿಯ ಗೋವಾ ಮುಖ್ಯಮಂತ್ರಿ

Image
ಪಣಜಿ:  ರಾಜ್ಯದಲ್ಲಿ ಗೋಮಾಂಸದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಬಿಜೆಪಿ ನೇತೃತ್ವದ ಗೋವಾ ಸರ್ಕಾರ ಹೇಳಿದೆ. ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಗೋವಾದಲ್ಲಿ ಗೋಮಾಂಸ ಸಾಕಾಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ಕ್ರಮಕೈಗೊಳ್ಳುವುದಾಗಿ ಖಚಿತಪಡಿಸಿದ್ದಾರೆ. ಒಂದು ವೇಳೆ ಕೊರತೆಯಾದಲ್ಲಿ ಅಕ್ಕಪಕ್ಕದ ರಾಜ್ಯಗಳಿಂದ ಗೋಮಾಂಸವನ್ನು ಆಮದು ಮಾಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಬೆಳಗಾವಿ ಹಾಗೂ ಇನ್ನಿತರ ಸ್ಥಳಗಳಿಂದ ಗೋಮಾಂಸವನ್ನು ತರಿಸುವ ಆಯ್ಕೆ ನಮ್ಮ ಮುಂದಿದೆ ಎಂದು ಅವರು ಹೇಳಿದ್ದಾರೆ. ಹೊರರಾಜ್ಯಗಳಿಂದ ಬರುವ ಗೋಮಾಂಸದ ಗುಣಮಟ್ಟವನ್ನು ತಜ್ಞ ವೈದ್ಯರ ತಂಡವು ಪರಿಶೀಲಿಸುವುದು ಎಂದು ಅವರುಸದನಕ್ಕೆ ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಗೋಮಾಂಸ ಸೇವಿಸುವ ಹಕ್ಕಿದೆ ಎಂದು ಕಳೆದ ವಾರ ಕೇಂದ್ರ ಸಚಿವ ರಾಮದಾಸ್ ಅಥಾವಲೆ ಹೇಳಿದ್ದರು.

ಸತ್ತವರ ಪಟ್ಟಿಯಲ್ಲಿ ಬದುಕಿರುವ ವ್ಯಕ್ತಿಯ ಹೆಸರು ಉಲ್ಲೇಖಿಸಿದ ಶೋಭಾ ಕರಂದ್ಲಾಜೆ: ವ್ಯಾಪಕ ಟೀಕೆ

Image
ಮಂಗಳೂರು:  ಕಳೆದ ನಾಲ್ಕು ವರ್ಷಗಳಲ್ಲಿ ಹತ್ಯೆಯಾದ ಹಿಂದು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಪಟ್ಟಿಯೊಂದನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಳುಹಿಸಿರುವ ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಜೆ, ಪಟ್ಟಿಯಲ್ಲಿ ಜೀವಂತ ಇರುವವರ ಹೆಸರನ್ನೂ ಉಲ್ಲೇಖಿಸಿ ಟೀಕೆಗೆ ಗುರಿಯಾಗಿದ್ದಾರೆ. 23 ಹೆಸರುಗಳನ್ನೊಳಗೊಂಡ, ರಾಜಕೀಯ ಹತ್ಯೆಗೆ ಸಂಬಂಧಿಸಿದ ಪಟ್ಟಿಯಲ್ಲಿ ವೈಯಕ್ತಿಕ ಕೊಲೆ, ಆತ್ಮಹತ್ಯೆ ಪ್ರಕರಣಗಳನ್ನೂ ಸೇರಿಸಲಾಗಿದೆ. ಈ ಪೈಕಿ, ಜೀವಂತ ಇರುವ ಅಶೋಕ್ ಪೂಜಾರಿ ಎಂಬುವವರ ಹೆಸರು ಉಲ್ಲೇಖಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿದೆ. ಹಲ್ಲೆಗೊಳಗಾಗಿದ್ದ ಅಶೋಕ್ ಪೂಜಾರಿ:  ಮೂಲತಃ ಕಾರ್ಕಳ ತಾಲ್ಲೂಕಿನವರಾಗಿರುವ ಅಶೋಕ್ ಪೂಜಾರಿ ಮಂಗಳೂರಿನಲ್ಲಿ ವಾದ್ಯದ ತಂಡದಲ್ಲಿ ಕೆಲಸ ಮಾಡುತ್ತಿರುವವರು. 2015ರಲ್ಲಿ ಮಂಗಳೂರಿನ ಕುಲಶೇಖರದಿಂದ ಗಣೇಶೋತ್ಸವ ಸಮಾರಂಭ ಮುಗಿಸಿ ವಾಪಸಾಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರು 45 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ಆದರೆ, ಮೃತರ ಪಟ್ಟಿಯಲ್ಲಿ ಇವರ ಹೆಸರನ್ನೂ ಶೋಭಾ ಉಲ್ಲೇಖಿಸಿದ್ದಾರೆ.

ಮಂಗಳೂರಿನಲ್ಲಿ 6th Gear ಐಷಾರಾಮಿ ಕಾರುಗಳ ಮಳಿಗೆಯ ಶುಭಾರಂಭ

Image
ಮಂಗಳೂರು:  ಮಂಗಳೂರು ನಗರದಲ್ಲಿ ಪ್ರಸಕ್ತ ಅತ್ಯಾಧುನಿಕ ಐಷರಾಮಿ ಕಾರುಗಳದ್ದೆ ಕಾರು ಬಾರು. ಕಣ್ಣು ಹಾಯಿಸಿದಲ್ಲೆಲ್ಲಾ ಐಷರಾಮಿ ಕಾರುಗಳ ತಿರುಗಾಟ ಕಂಡುಬರುತ್ತದೆ. ಮೊದಲು ಕೇವಲ ಶ್ರೀಮಂತರಿಗಷ್ಟೇ ಖರೀದಿಸಲು ಸಾಧ್ಯವಿದ್ದಂತಹ ಕಾರುಗಳು ಇವತ್ತು ಜನ ಸಾಮಾನ್ಯರ ಕೈಗೆಟಕುವ ಬೆಲೆಗಳಲ್ಲಿ ಲಭ್ಯವಿದೆ. ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ದಕ್ಷಿಣ ಭಾರತದಲ್ಲಿ ಅನೇಕ ಮಳಿಗೆಗಳನ್ನು  ಹೊಂದಿರುವ 6th Gear ಎಂಬ ಐಷಾರಾಮಿ ಕಾರುಗಳ ಮಳಿಗೆಯು ಈದೇ ಆದಿತ್ಯವಾರ ದಿನಾಂಕ 16-7-17 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಕಣ್ಣೂರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಮಳಿಗೆಯು ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿರಲಿದ್ದು ಸೇಲ್ಸ್, ಅತ್ಯುತ್ತಮ ಮಟ್ಟದ ಸರ್ವಿಸ್ ಮತ್ತು ಬಿಡಿಭಾಗಗಳ ಸೇವೆಯನ್ನು ಗ್ರಾಹಕರಿಗೆ ನೀಡಲಿದೆ. ಇಂಟಕ್ ರಾಷ್ರ್ಟೀಯ ಅಧ್ಯಕ್ಷರಾಗಿರುವ ಡಾ. ಜಿ ಸಂಜೀವ ರೆಡ್ಡಿಯವರು ಮಳಿಗೆಯ ಉದ್ಗಾಟನೆಯನ್ನು ನೆರವೇರಿಸಲಿರುವರು. ಈ ಸಂಧರ್ಭದಲ್ಲಿ ರಾಜ್ಯ ಇಂಟಕ್ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿ, ಕಂಪನಿಯ ಎಂ.ಡಿ ವೇಣುಗೊಪಾಲ್ ನಾಯ್ಡು ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡೆಸುವ ಸಂಘಟನೆಗಳ ಪ್ರಯತ್ನ ವಿಫಲವಾಗಲಿದೆ ; ಸಿದ್ದರಾಮಯ್ಯ

Image
ಮಂಗಳೂರು:  ಕಾನೂನು ಸುವ್ಯವಸ್ಥೆ ಹದಗೆಡೆಸುವ ಪ್ರಯತ್ನವನ್ನು ಕೆಲ ಸಂಘಟನೆಗಳು ಮಾಡುತ್ತಿವೆ. ಅವರ ಪ್ರಯತ್ನ ಫಲಿಸಲ್ಲ. ಅಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಮತ್ತು ವಿವಿಧ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿಗಳ ಸಮಾವೇಶ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆ ಅವರು ಮಾತನಾಡಿದರು. ದಕ ಜಿಲ್ಲೆಯಲ್ಲಿ ಕೆಲವು ದಿನಗಳಿಂದೀಚೆಗೆ ಸಮಾಜಘಾತುಕ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡುತ್ತಿವೆ ಆದರೆ ಸರಕಾರ ಅದಕ್ಕೆ ಅವಕಾಶ ನೀಡುವುದಿಲ್ಲ. ಸಮಾಜಘಾತುಕ ಶಕ್ತಿಗಳ ವಿರುದ್ದ ಬಿಗಿ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುವ ಸಂಘಟನೆ ಸಫಲತೆ ಕಾಣುವುದಿಲ್ಲ ಎಂದರು. ಇದೇ ವೇಳೆ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು. ಈ ವೇಳೆ ಸಚಿವರಾದ ಯು.ಟಿ.ಖಾದರ್, ರಮಾನಾಥ ರೈ, ಶಾಸಕ ಅಭಯಚಂದ್ರ ಜೈನ್, ಐವನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.