ಎಐಸಿಸಿಯ ಕಾರ್ಯದರ್ಶಿ ಪಿ.ಸಿ ವಿಷ್ನುನಾತ್ ಜೊತೆ ಲುಕ್ಮಾನ್
ಮಂಗಳೂರು: ನಾಲ್ಕು ವರುಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕಾಂಗ್ರೆಸ್ ಸರಕಾರವು ಜನಸ್ನೇಹಿಯಾಗಿ ಐದನೇ ವರುಷಕ್ಕೆ ದಾಪುಗಾಲಿಡುತ್ತಿದ್ದು ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಅಭೂತಪೂರ್ವ ಜನಮನ್ನನೆ ಪಡೆಯುತ್ತಿದ್ದು ಇದರಿಂದಾಗಿ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುಣಾವಣೆಗೆ ಪೂರ್ವಭಾವಿಯಾಗಿ ಈಗಾಗಲೆ ಚುಣಾವಣ ತಯಾರಿ ಆರಂಭಿಸಿದ್ದು ಇದರ ಅಂಗವಾಗಿ ದ.ಕ ಜಿಲ್ಲೆಯಲ್ಲಿ ವೃತ್ತಿಪರ ಘಟಕವನ್ನು ಆರಂಭಿಸಿದೆ.
ಇದರ ಉದ್ಗಾಟನೆಯನ್ನು ಎಐಸಿಸಿಯ ಕಾರ್ಯದರ್ಶಿಯಾದ ಪಿ.ಸಿ ವಿಷ್ನುನಾತ್ ನೆರವೇರಿಸಿ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ತರ ಪಾಲುದಾರಿಕೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರಿಗೆ ಮಾಹಿತಿಗಳನ್ನು ನೀಡಿದರು.
ದ.ಕ ಜಿಲ್ಲಾ ವೃತ್ತಿಪರ ಘಟಕದ ಅಧ್ಯಕ್ಷರಾಗಿ ನಿತಿನ್ ರೈ ಮತ್ತು ಉಪಾಧ್ಯಕ್ಷರನ್ನಾಗಿ ದ.ಕ ಜಿಲ್ಲಾ ಕಾಂಗ್ರೆಸ್ ಮಾನವ ಹಕ್ಕು ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ದಿನಕರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿರುವ ಲುಕ್ಮಾನ್ ರವರು ಪಿ.ಸಿ ವಿಷ್ನುನಾತ್ ರವರನ್ನು ಭೇಟಿಮಾಡಿ ಮಾತುಕಥೆ ನಡೆಸಿದರು.
ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಮಾನವ ಹಕ್ಕು ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ದಿನಕರ್ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಿಪಲ್ ರಾಜ್, ನವೀದ್ ಅಖ್ತರ್,ಮೂಡುಬಿದ್ರೆ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಸರ್ಫರಾಝ್, ಕಾರ್ಯದರ್ಶಿಗಳಾದ ಶೈಲೇಶ್ ಕೊಟ್ಟಾರಿ, ಆಶಿರ್ ಫರಂಗಿಪೇಟೆ, ಸೌಹಾನ್ ಹಾಗು ಯುವ ಕಾಂಗ್ರೆಸ್ ಕಾರ್ಯಕರ್ತರಾದ ನವಲ್ ಪುತ್ತೂರು, ಮುನಾವರ್ ಪಡೀಲ್, ಸಫ್ವಾನ್ ಫಾನ್ಸ್ ಮತ್ತು ಮನ್ಸೂರ್ ನ್ಯೂಸ್ ಹಂಟ್ ಉಪಸ್ಥಿತರಿದ್ದರು.


Comments
Post a Comment