ನಮ್ಮವರೇ ನಮ್ಮನ್ನು ಲೂಟಿ ಮಾಡಿದ್ರು : ಹಾರ್ದಿಕ್ ಪಾಂಡ್ಯ
ಲಂಡನ್: ಓವಲ್ ಮೈದಾನದಲ್ಲಿ ನಡೆದ ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಹೀನಾಯ ಸೋಲು ಕಂಡಿದೆ.
ಈ ಸೋಲಿಗೆ ಕಾರಣಗಳ ಕುರಿತು ಭಾರೀ ಚರ್ಚೆಯೇ ನಡೆದಿದೆ. ಕಾರಣ ಏನೆಂಬುದನ್ನು ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.
ಈ ಪಂದ್ಯದಲ್ಲಿ ಪಾಂಡ್ಯ 43 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ರವೀಂದ್ರ ಜಡೇಜ ಜೊತೆಗೂಡಿ ಆಟವಾಡುವಾಗ ಪಾಂಡ್ಯ ರನ್ ಔಟ್ ಆಗಿದ್ದರು. ಅವರು ಔಟಾಗಿ ಬಂದ ಬಳಿಕ ಟ್ವಿಟರ್ ನಲ್ಲಿ ಸೋಲಿಗೆ ಕಾರಣ ನಮ್ಮವರೇ ಎಂದು ಹೇಳಿದ್ದಾರೆ.
ನಮ್ಮವರೇ ನಮ್ಮನ್ನು ಲೂಟಿ ಮಾಡಿದ್ರು ಎಂದು ಪಾಂಡ್ಯ ಟ್ವೀಟ್ ಮಾಡಿದ್ದು, ಇದು ವಿವಾದ ಪಡೆದುಕೊಂಡಿದೆ. ಕೂಡಲೇ ಪಾಂಡ್ಯ ಟ್ವೀಟ್ ಡಿಲೀಟ್ ಮಾಡಿದ್ದಾರೆ.
‘ಪಾಕ್ ಎದುರು ಸೋಲಿನ ಕುರಿತಾಗಿ ಪಾಂಡ್ಯ ಹೇಳಿದ ಮಾತು ಇದಾಗಿದೆ. ನಮ್ಮವರೇ ಸೋಲಿಗೆ ಕಾರಣ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಾಂಡ್ಯ ಟ್ವೀಟ್ ರೀ ಟ್ವೀಟ್ ಆಗಿ ವೈರಲ್ ಆಗಿದೆ.



Comments
Post a Comment