Posts

Showing posts from October, 2017

ಯಶಸ್ವಿ ಸದ್ಭಾವನಾ ಉಪವಾಸ ಸತ್ಯಾಗ್ರಹ: ಲುಕ್ಮಾನ್

Image
ಮಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಶಾಂತಿ, ಸಹೋದರತೆ ಹಾಗೂ ಸಹಿಷ್ಣುತೆಗಾಗಿ ಮಂಗಳವಾರ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಮತ್ತು ನಾಡಿನ ಮತೀಯ ಸಾಮರಸ್ಯಕ್ಕಾಗಿ "ಸದ್ಭಾವನಾ ಉಪವಾಸ ಸತ್ಯಾಗ್ರಹ" ಕಾರ್ಯಕ್ರಮವನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭ ಧರ್ಮಸ್ಥಳ ಭೇಟಿ ನೀಡಿದ್ದಾಗ, ವಿಶೇಷ ವಿಮಾನದ ಮೂಲಕ ಕಾರಾಗಲಿ, ಹೆಚ್ಚುವರಿ ಹೆಲಿಕಾಪ್ಟರ್‌ಗಳಾಗಲಿ ಬಂದಿರಲಿಲ್ಲ, ಸರಳ ಜೀವನದ ಜತೆಗೆ ಬಡಜನರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸಿದಂತಹ ಇಂದಿರಾಗಾಂಧಿ ಅವರ ಕಾರ್ಯಚಟುವಟಿಕೆಗಳು ದೇಶಕ್ಕೆ ಮಾದರಿ ಎಂದು ಹೇಳಿದರು. ರಾಜ್ಯ ಸರಕಾರದ ಮುಖ್ಯಸಚೇತಕ ಐವನ್ ಡಿಸೋಜ ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವಾಭಿಮಾನದ ಬದುಕು ರೂಪಿಸಿದವರು. ತೊಕ್ಕೊಟ್ಟುವಿನಲ್ಲಿ ಅವರ ಪುಣ್ಯತಿಥಿಯ ಅಂಗವಾಗಿ ಆರಂಭಗೊಂಡ ಉಪವಾಸ ಕಾರ್ಯಕ್ರಮ ಪ್ರಪಂಚದಾದ್ಯಂತ ನಡೆಯಲಿ, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ ಎಂದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಉಪವಾಸ ಸತ್ಯಾಗ್ರಹವು ಸಂಜೆ 6 ಗಂಟೆಯ ವರೆಗೆ ನಡೆಯಿತು.ಈ ಕಾರ್ಯಕ್ರಮವು ಕೆಪಿಸಿಸಿ ಪ್ರ.ಕಾರ್ಯದರ್ಶಿ ಪಿ ವಿ ಮೋಹನ್ ರವರ ನೇತೃತ್ವದಲ್ಲಿ ನಡೆಯಿತು ಮತ್ತು ಇವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ರವರು ಬೆಂಬಲವಾಗಿ ನಿಂ...

ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ದೇಶ ಹುಟ್ಟಿದ್ದು ಹೇಗೆ???

Image
ಭಾರತದ ಉದ್ಯಮಿ ಜಮ್‌ಶೆಟ್‌ಜಿ ಟಾಟಾ ಅವರು 1873ರಲ್ಲಿ ಜೆರುಸಲೇಂಗೆ ಭೇಟಿ ನೀಡಿದ್ದರು. ಅಲ್ಲಿನ ಜನರು ತೋರುತ್ತಿದ್ದ ಧಾರ್ಮಿಕ ಅಂಧಶ್ರದ್ಧೆ ಕಂಡು ಅವರು ಹೌಹಾರಿದ್ದರು. ‘ಈ ರೀತಿ ಇರುವುದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದರು. ‘ಜಗತ್ತಿನ ಇತರರಿಂತ ತಾವು ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿರುವವರು ಇಂತಹ ಹುಚ್ಚು ಮೂರ್ಖರೇ? ಅಥವಾ ಈ ಎಲ್ಲವನ್ನೂ ಅವರು ನಂಬುತ್ತಿದ್ದಾರೆ ಎಂದು ಹೇಳಿಕೊಳ್ಳುವಂತಹ ಆಷಾಢಭೂತಿಗಳೇ? ಅಥವಾ ಜೆರುಸಲೇಂನಲ್ಲಿ ಕಾಣಿಸಿಕೊಳ್ಳುವ ಈ ಅಸಂಗತ ಅಂಶಗಳು ನಿಜವಾದ ಭಕ್ತಿಯೇ’ ಎಂದು ಅವರು ಕೇಳಿದ್ದರು. ಅವರು ನಗರದ ಜನರ ಜತೆ ಮಾತನಾಡಿದ್ದರು. ‘ಅವರ ಮೂರ್ಖತನ, ಪಕ್ಷಪಾತಿ ತುಡಿತ, ಕಣ್ಣಿಗೆ ರಾಚುವ ಆಷಾಢಭೂತಿತನಗಳು ನೇರವಾದ ವಾಗ್ವಾದದಲ್ಲಿನ ಸಾಮಾನ್ಯ ಸಭ್ಯತೆಯನ್ನು ಮರೆಸಿಬಿಡಬಹುದು’ ಎಂದು ಜೆಮ್‌ಶೆಟ್‌ಜಿ ಅಭಿಪ್ರಾಯಪಟ್ಟಿದ್ದರು. ‘ಇಸ್ಲಾಂ ಧರ್ಮಕ್ಕೆ ಸೇರಿದ ಸ್ಥಳಗಳ ಪವಾಡ ಮತ್ತು ಪಾವಿತ್ರ್ಯದ ಬಗ್ಗೆ ಕ್ರೈಸ್ತ ಗೈಡ್‌ಗಳು ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ಸ್ಥಳಗಳ ಪಾವಿತ್ರ್ಯ ಮತ್ತು ಪವಾಡಗಳ ಬಗ್ಗೆ ಮುಸ್ಲಿಂ ಗೈಡ್‌ಗಳು ವಿವರಿಸುವಾಗ ಅವರ ಧ್ವನಿಯಲ್ಲಿ ಅಡಗಿರುವ ಅವಹೇಳನ ಮತ್ತು ಅನುಮಾನಗಳು ಗಮನಾರ್ಹ’ ಎಂದು ಅವರು ಹೇಳಿದ್ದರು. ಜೆಮ್‍ಶೆಟ್‌ಜಿ ಅವರು ಜೆರುಸಲೇಂಗೆ ಭೇಟಿ ನೀಡಿದ್ದಾಗ ಅಸಂಗತತೆ ಮತ್ತು ಆಷಾಢಭೂತಿತನಗಳನ್ನು ಪ್ರದರ್ಶಿದವರು ಮುಖ್ಯವಾಗಿ ಕ್ರೈಸ್ತರು. ಆದರೆ ಸ್ವಲ್ಪದರಲ್ಲಿಯೇ ಅದಕ್ಕೆ ಮತ್ತೊ...

ಸ್ಟಾರ್ಟ್ ಅಪ್ ಇಂಡಿಯಾ ಒಕೆ, ಶಟ್ ಅಪ್ ಇಂಡಿಯಾ ಯಾಕೆ?: ಮೋದಿಗೆ ರಾಹುಲ್ ಪ್ರಶ್ನೆ

Image
ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ದೇಶದ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಗುರುವಾರ ಆರೋಪಿಸಿದ್ದಾರೆ. ಇಂದು ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಆರ್ಥಿಕತೆ ಚೇತರಿಕೆಗಾಗಿ ಸ್ಟಾರ್ಟ್ ಅಪ್ ಇಂಡಿಯಾವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಶಟ್ ಅಪ್ ಇಂಡಿಯಾ ಆಗಬಾರದು ಎಂದು ಹೇಳಿದ್ದಾರೆ. ಸರ್ಕಾರಕ್ಕೂ ಜನರ ಮೇಲೆ ನಂಬಿಕೆ ಇಲ್ಲ. ಜನರನ್ನು ಕಳ್ಳರಂತೆ ನೋಡುತ್ತಿದೆ. ಆದರೆ ಎಲ್ಲ ಹಣವು ಕಪ್ಪಲ್ಲ, ಎಲ್ಲ ಕಪ್ಪು ನಗದಲ್ಲ. ಪ್ರಧಾನಿ ಮೋದಿ ತಮ್ಮ ದೊಡ್ಡ ಎದೆ ಹಾಗೂ ಸಣ್ಣ ಹೃದಯದಿಂದ ಅಧಿಕಾರ ಬಳಕೆ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ವ್ಯಾಪಾರಸ್ಥರು ವಿಶ್ವಾಸದ ಮನಸ್ಥಿತಿಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಈ ಸರ್ಕಾರದ ಮೇಲಿನ ವಿಶ್ವಾಸವೇ ಸತ್ತುಹೋಗಿದೆ. ಪ್ರಧಾನಿಗಳು ಹಾಗೂ ಸರ್ಕಾರ ಪ್ರತಿಯೊಬ್ಬರನ್ನು ಕಳ್ಳರಂತೆ ನೋಡುತ್ತಿದೆ. ಒಬ್ಬರ ಮಾತನ್ನು ಕೇಳಿಸಿಕೊಳ್ಳುವ ಮೂಲಕ ವಿಶ್ವಾಸವನ್ನು ಬೆಳೆಸಬಹುದು. ಆದರೆ ಇವತ್ತು ಸರ್ಕಾರದ ಯಾರೊಬ್ಬರು ಜನರ ನೋವು- ಸಂಕಷ್ಟವನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್ ...

ಸಮಾನ ಮನಸ್ಕ ಸಂಘಟನೆಗಳಿಂದ 5 ದಿನಗಳ ಸದ್ಭಾವನಾ ಉಪವಾಸ ಸತ್ಯಾಗ್ರಹ

Image
ಮಂಗಳೂರು : ಕರಾವಳಿ ಕರ್ನಾಟಕದಲ್ಲಿ ಕದಡಿ ಹೋಗಿರುವ ಸಮುದಾಯಗಳ ನಡುವಿನ ಸೌಹಾರ್ದ ಮತ್ತು ಸಹಕಾರಗಳನ್ನು ಮರುಪ್ರತಿಷ್ಠಾಪಿಸುವ ಸಲುವಾಗಿ ಐದು ದಿನಗಳ *"ಸದ್ಭಾವನಾ ಉಪವಾಸ ಸತ್ಯಾಗ್ರಹವನ್ನು"* ಹಮ್ಮಿಕೊಳ್ಳಲಾಗಿದೆ ಎಂದು ಇಂದು ಸಂಜೆ ಮಂಗಳೂರಿನ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯರ್ಶಿಯಾದ ಪಿ.ವಿ ಮೋಹನ್ ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಕಾನೂನು ಕಟ್ಟಲೆಗಳನ್ನು ಅಣಕ ಮಾಡುವ ರೀತಿಯಲ್ಲಿ ಘಟನೆಗಳು ನಡೆಯುತಿದ್ದು, ಜನರ ವೈಯಕ್ತಿಕ ಬದುಕಿನ ಮೇಲಿನ ದಾಳಿಗಳನ್ನು ಅಲ್ಲಲ್ಲಿ ನೋಡುತ್ತಿದ್ದೇವೆ. ಜಾತೀಯವಾದ, ಧಾರ್ಮಿಕ ಅಸಹಿಷ್ಣುತೆ, ಮತಾಂದತೆ ಹಾಗೂ ಪ್ರತ್ಯೇಕತಾ ಮನೋಭಾವಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ನಿರಾಶದಾಯಕವಾದ ಮತ್ತು ಹಿಂಸೆಯಿಂದ ರಾರಾಜಿಸುವ ಸನ್ನಿವೇಶದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಒಲವು, ನಿಲುವುಗಳನ್ನು ಮತ್ತೆ ಮರು ಸಂಘಟಿಸುವ ಅಗತ್ಯವಿದೆ ಅಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದ ಧ್ಯೇಯೋದ್ದೇಶಗಳಾಗಿದ್ದ ಪ್ರಜಾತಂತ್ರ, ಸೆಕ್ಯೂಲರ್ ವಾದ, ಸಾಮಾಜಿಕ ನ್ಯಾಯ ಮತ್ತು ಬಹು ಸಂಸ್ಕೃತಿಯನ್ನು ಜನ ಸಮುದಾಯದಲ್ಲಿ ಮತ್ತೆ ಹುಟ್ಟುಹಾಕುವ ಸಲುವಾಗಿ *ಜಿಲ್ಲೆಯ 5 ಬೇರೆ ಬೇರೆ ನಗರಗಳಲ್ಲಿ ಅಕ್ಟೋಬರ್ 31 ರಿಂದ ಡಿಸೆಂಬರ್ 6ರ ವರೆಗೆ 5 ದಿನಗಳ ಸದ್ಭಾವನಾ ಉಪವಾಸ ಸತ್ಯಾಗ್ರಹವು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದ್ದು*...

ಬಲ್ಮಟ್ಟಾದಲ್ಲಿ ಗಾಂಜಾ ಮಾರಾಟ ಮಾಡುತಿದ್ದ 3 ವಿದ್ಯಾರ್ಥಿಗಳ ಬಂಧನ

Image
ಮಂಗಳೂರು: ಅಕ್ಟೋಬರ್ 23 ರಂದು ಬಾಲ್ಮಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗ್ಯಾಂಜವನ್ನು ಮಾರಾಟ ಮಾಡುವಾಗ ಆಂಟಿ-ರೌಡಿ ಸ್ಕ್ವಾಡ್ ಪೊಲೀಸರು ಮೂರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಹೀನ್ ಕೆ ಅಯುಬ್ (21), ಶಹನ್ ಬಶೀರ್ (20) ಮತ್ತು ಸಚಿನ್ ಪ್ರದೀಪನ್ (20) ಕೇರಳದವರು ಎಂದು ಗುರುತಿಸಲಾಗಿದೆ. ಆರ್ಎಸ್ಎಸ್ ಪೊಲೀಸರ ಪ್ರಕಾರ ಅಕ್ಟೋಬರ್ 23 ರಂದು ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅಪಾರ್ಟ್ಮೆಂಟನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ, ಒಂದು ಚೀಲದಲ್ಲಿ 12 ಪ್ಯಾಕೆಟ್ ಗಾಂಜಾ (400 ಗ್ರಾಂಗಳು) ಪತ್ತೆಯಾಗಿದೆ. ವಿಚಾರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದ ಕೇರಳದಿಂದ ಗಾಂಜಾವನ್ನು ಈಶ್ವರನ್ ಎಂಬ ವ್ಯಕ್ತಿಯು ಸರಬರಾಜು ಮಾಡಿತಿದ್ದು ಮತ್ತು ಅದನ್ನು ಬಲ್ಮಾಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದರು. ಪೊಲೀಸರು 400 ಗ್ರಾಂ ಗ್ಯಾಂಜವನ್ನು ಮತ್ತು 32,300 ರೂ ಮೌಲ್ಯದ 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡರು. ಆರೋಪಿಗಳನ್ನು ಮತ್ತ...

ಟಿಪ್ಪು ಮತಾಂಧನಾಗಿದ್ದರೆ ಪೂರ್ಣಯ್ಯ ದಿವಾನ ಆಗುತ್ತಿರಲಿಲ್ಲ: ಪಾಪು

Image
ಧಾರವಾಡ:  ಟಿಪ್ಪು ಸುಲ್ತಾನ ಮತಾಂಧನಾಗಿದ್ದರೆ, ತನ್ನ ಆಸ್ಥಾನಕ್ಕೆ ಪೂರ್ಣಯ್ಯನನ್ನು ಏಕೆ ದಿವಾನನನ್ನಾಗಿ ಮಾಡಿಕೊಳ್ಳುತ್ತಿದ್ದ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರಶ್ನಿಸಿದ್ದಾರೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅವರು, ''ಶೃಂಗೇರಿಯ ಶಾರದಾ ಮಾತೆ ದೇಗುಲದ ಕೆಳಗೆ ದ್ರವ್ಯ ಇದೆ ಎನ್ನುವ ಹುಚ್ಚು ಭಾವನೆಯಿಂದ ಪೇಶ್ವೆಗಳು ಅದನ್ನು ಕೆಡವಿ ಹಾಕಿದರು. ಶೃಂಗೇರಿಯ ಜಗದ್ಗುರು ಕೆಳದಿ ರಾಜ್ಯವಾದ ಮಂಗಳೂರಿಗೆ ಓಡಿ ಹೋಗಿದ್ದರು. ಟಿಪ್ಪು ಸುಲ್ತಾನನು ಮತಾಂಧನಾಗಿದ್ದರೆ, ಶಾರದಾ ಮಾತೆಯ ದೇವಾಲಯವನ್ನು ಪುನಃ ಕಟ್ಟಿ ಶಾರದಾ ಮಾತೆಯ ವಿಗ್ರಹವನ್ನು ಅಲ್ಲಿ ಏಕೆ ಮತ್ತೆ ಸ್ಥಾಪಿಸುತ್ತಿದ್ದರು, ಕೆಳದಿ ರಾಜ್ಯಕ್ಕೆ ಓಡಿ ಹೋಗಿದ್ದ ಶೃಂಗೇರಿಯ ಜಗದ್ಗುರುಗಳನ್ನು ಮತ್ತೆ ಶೃಂಗೇರಿಗೆ ಕರೆಸಿಕೊಂಡು ಅವರನ್ನು ಮತ್ತೆ ಪೀಠದ ಮೇಲೆ ಏಕೆ ಕೂರಿಸುತ್ತಿದ್ದ,'' ಎಂದು ಪ್ರಶ್ನಿಸಿದ್ದಾರೆ. ಕಾಗಕ್ಕ-ಗುಬ್ಬಕ್ಕ ಕಥೆ: ''ಟಿಪ್ಪು ಸುಲ್ತಾನನು ಶೃಂಗೇರಿ ಮಠಕ್ಕೆ ಏನೇನು ಕೊಟ್ಟಿರುವನೆಂದು 37 ತಾಮ್ರ ಪತ್ರಗಳಲ್ಲಿ ಮಾಹಿತಿ ಸಿಕ್ಕಿವೆ. ಏನಾದರೂ ಕಾಗವ್ವ-ಗುಬ್ಬವ್ವ ಕಥೆಯನ್ನು ಹೇಳಿದರೆ ಜನರು ನಂಬುತ್ತಾರೆಂದು ಚಿದಾನಂದ ಮೂರ್ತಿಯಂಥವರು ಇಲ್ಲದ ಕಥೆ ಸೃಷ್ಟಿಸಿ ಟಿಪ್ಪು ಹೆಸರಿಗೆ ಕಳಂಕ ತರುವ ಕೆಲಸ ಮಾಡಲು ಹೊರಟ್ಟಿದ್ದಾರೆ,'' ಎಂದು ಆರೋಪಿಸಿದ್ದಾರೆ. ''ಟಿಪ್ಪು ಸುಲ್ತಾನನ ಅಂತ್ಯಕ್ರಿಯೆ ನಡೆದಾಗ ಅ...

ಪ್ರಧಾನಿ ಸೆಲ್ಫಿ ಕ್ಲಿಕ್ಕಿಸಿಕೊಂಡಾಗಲೆಲ್ಲಾ ಚೀನಾ ಯುವಕರಿಗೆ ಉದ್ಯೋಗ ಸಿಗುತ್ತೆ: ರಾಹುಲ್ ಗಾಂಧಿ

Image
ಗಾಂಧಿ ನಗರ:  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ( ಜಿಎಸ್ ಟಿ) ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟು ನಿಷೇಧದಿಂದ ಚೇತರಿಸಿಕೊಳ್ಳುತ್ತಿರುವ ದೇಶಕ್ಕೆ ಮತ್ತೊಂದು ಹೊಡೆತ ನೀಡಿದೆ ಎಂದು ಆರೋಪಿಸಿದ್ದಾರೆ.  ಗುಜರಾತ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಜಿಎಸ್ ಟಿ ಅಂದ್ರೆ ಗಬ್ಬರ್ ಸಿಂಗ್ ಟ್ಯಾಕ್ಸ್, ನರೇಂದ್ರ ಮೋದಿ ವೈಯಕ್ತಿಕ ಹುಚ್ಚಾಟಿಕೆಗಾಗಿ ನೋಟು ನಿಷೇಧವನ್ನು ಕಳೆದ ವರ್ಷ ಜಾರಿಗೆ ತಂದು ಲಕ್ಷಾಂತರ ಜನರಿಗೆ ಸಮಸ್ಯೆ ಉಂಟುಮಾಡಿದ್ದರು, ನಾವು ಜಿಎಸ್ ಎಸ್ ಟಿ ತೆರಿಗೆ ಸ್ಲ್ಯಾಬ್ ನ್ನು ಶೇ.18ಕ್ಕೆ ಇಳಿಕೆ ಮಾಡಲು ಮನವಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿಲ್ಲ ಮೋದಿ ಅವರ ಸರ್ಕಾರ ಬಡವರ ವಿರೋಧಿ ಸರ್ಕಾರ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ಇದೇ ವೇಳೆ ಮೋದಿಯ ಸೆಲ್ಫಿ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದ್ದು, ನೀವು ಪ್ರತಿ ಬಾರಿ ಸೆಲ್ಫಿ ಕ್ಲಿಕ್ಕಿಸಿಕೊಂಡಾಗ ಚೀನಾದ ಯುವಕರಿಗೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದ್ದಾರೆ. 

ಹೋಟೆಲ್'ನಲ್ಲಿ ರಾಹುಲ್, ಹಾರ್ದಿಕ್ ರಹಸ್ಯ ಭೇಟಿ?: ಕುತೂಹಲ ಮೂಡಿಸಿದೆ ಗುಜರಾತ್ನ ರಾಜಕೀಯ

Image
ಅಹ್ಮದಾಬಾದ್:  ಹೋಟೆಲ್ ವೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್ ಅವರು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರತೊಡಗಿದ್ದು, ಹಾರ್ದಿಕ್ ಅವರ ಈ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸತೊಡಗಿದೆ.  ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಪಟೇಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂಬ ವರದಿಗಳು ಕೇಳಿಬಂದಿದ್ದವು. ಈ ವೇಳೆ ಹಾರ್ದಿಕ್ ಅವರ ವರದಿಗಳನ್ನು ಅಲ್ಲಗೆಳೆದಿದ್ದರು.  ರಾಹುಲ್ ಹಾಗೂ ಹಾರ್ದಿಕ್ ಅವರು ಹೋಟೆಲ್ ವೊಂದರಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿರುವುದನ್ನು ಖಾಸಗಿ ಸುದ್ದಿ ವಾಹಿನಿಯೊಂದು ಇದೀಗ ಬಹಿರಂಗಗೊಳಿಸಿದೆ.  ರಾಹುಲ್ ಗಾಂಧಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ ಬಳಿಕ ಹೋಟೆಲ್'ನ ಇಲವೇಟರ್'ಗೆ ಹಾರ್ದಿಕ್ ಪಟೇಲ್ ಪ್ರವೇಶಿಸುತ್ತಿರುವ ದೃಶ್ಯಗಳು ಸುದ್ದಿ ವಾಹಿನಿಗೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.  ಗುಜರಾತ್ ರಾಜ್ಯದ ಸುದ್ದಿ ವಾಹಿನಿಯೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ಸೋಮವಾರದ ದಿನದಂದು ಉಮ್ಮೆದ್ ಹೋಟೆಲ್ ನಲ್ಲಿ 40 ನಿಮಿಷಗಳ ಕಾಲ ಹಾರ್ದಿಕ್ ಪಟೇಲ್ ಹಾಗೂ ರಾಹುಲ್ ಗಾಂಧಿಯವರು ಮಾತುಕತೆ ನಡೆಸಿದ್ದಾರೆಂದು ವರದಿಯಲ್ಲಿ ತಿಳಿಸಿದೆ. ಅಲ್ಲದೆ, ರಾಹುಲ್ ಹೋಟೆಲ್ ನಲ್ಲಿಯೇ ಹಾರ್ದಿಕ್ ಪಟೇಲ್ ಮಾತ್ರ ಹೋಟೆಲ್ ಒಳಗೆ ಪ್ರವೇಶ ಮ...

ಕೊಲೆಸ್ಟ್ರಾಲ್: ಔಷಧ ಮಾಫಿಯಾದ ಭೂತ!

Image
ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ ಹತ್ತರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತ್ತದೆ. ಉಳಿದಂತೆ ನಮ್ಮ ದೇಹ ತನಗೆ ಬೇಕಾದಷ್ಟು ಕೊಲೆಸ್ಟ್ರಾಲನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಆಹಾರ ನೀರಿಗಿಂತ ಹೆಚ್ಚು ಅಗತ್ಯ. ಇದು ಇಲ್ಲವಾದರೆ ಮನುಷ್ಯ ಸತ್ತೇ ಹೋಗುತ್ತಾನೆ. ದೇಹದಲ್ಲಿ ೧೨೦ ಟ್ರಿಲಿಯನ್ ಕಣಗಳಿವೆ. ಕೆಲವು ಮಿಲಿಯ ಕಣಗಳು ಆಯುಷ್ಯ ಮುಗಿದು ಪ್ರತಿದಿನ ಸಾಯುತ್ತವೆ. ಪ್ರತಿ ಕಣ ಹುಟ್ಟಬೇಕಾದರೆ, ಆ ಕಣದ ಆರೋಗ್ಯ ರಕ್ಷಣೆ ಆಗಬೇಕಾದರೆ ಕೊಲೆಸ್ಟ್ರಾಲ್ ಬೇಕು. ಲಿವರ್ ನಲ್ಲಿ ಕೊಲೆಸ್ಟ್ರಾಲ್ ಸೃಷ್ಟಿಯಾಗುತ್ತದೆ. ಒತ್ತಡ ಹೆಚ್ಚಿದಾಗ ಅದರ ನಿವಾರಣೆಗೆ ಕೊಲೆಸ್ಟ್ರಾಲ್ ಬೇಕು. ದೇಹದ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡಬೇಕೆಂದರೂ ಕೊಲೆಸ್ಟ್ರಾಲ್ ಬೇಕೇ ಬೇಕು. ಒಳ್ಳೆಯ ಕೊಲೆಸ್ಟ್ರಾಲ್, ಕೆಟ್ಟ ಕೊಲೆಸ್ಟ್ರಾಲ್ ಎಂಬುದಿಲ್ಲ. ಮನುಷ್ಯ ಹುಟ್ಟಿಸಿದ ಜಾತಿಯಂತೆ ಇದು ಕೂಡ ಕೃತಕ. ಔಷಧ ಕಂಪನಿಗಳು ಹಣ ಮಾಡಲು ಹುಟ್ಟಿಸಿದ ನಂಬಿಕೆಯಿದು. ರಕ್ತದಲ್ಲಿರುವ ಕೊಲೆಸ್ಟ್ರಾಲ್ ನಾವು ತಿಂದು ಬಂದಿರುವುದಿಲ್ಲ. ಶೇ ೧೦ ರಷ್ಟು ಮಾತ್ರ ತಿಂದ ಆಹಾರದಿಂದ ಬರುತ್ತದೆ. ೩೦೦ ಮಿ.ಗ್ರಾಂ ಕೊಲೆಸ್ಟ್ರಾಲ್ ಇದ್ದರೆ ಅದನ್ನು ಕಡಿಮೆ ಮಾಡಬೇಕೆಂದು ನೀವು ಹುಲ್ಲು ತಿಂದರೂ ೨೭೫ ಕ್ಕಿಂತ ಕಡಿಮೆಯಾಗುವುದಿಲ್ಲ. ಕೊಲೆಸ್ಟ್ರಾಲ್ ಶತ್ರುವಲ್ಲ ಮಿತ್ರ. ಇದು ಕಾಯಿಲೆಯೂ ಅಲ್ಲ. ನಾನಿದನ್ನು ೪೫ ವ...

ಟಿಪ್ಪು ಜಯಂತಿ ಹಗ್ಗ ಜಗ್ಗಾಟ

Image
ಬೆಂಗಳೂರು:  ಟಿಪ್ಪು ಜಯಂತಿ ಕುರಿತಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಪುನಾ ಹಗ್ಗಜಗ್ಗಾಟ ಆರಂಭವಾಗಿದೆ. ‘ಇದು ಕೋಮು ಗಲಭೆಗೆ ಪ್ರಚೋದನೆ ನೀಡುವುದರಿಂದ ಆಚರಣೆ ಮಾಡಬಾರದು’ ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ. ಆದರೆ, ‘ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಿಲ್ಲಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ನಾಯಕರಾದ ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ ಟಿಪ್ಪು ಜಯಂತಿ ಆಚರಣೆ ಕೂಡದು ಎಂದು ಪಟ್ಟು ಹಿಡಿದಿದ್ದಾರೆ. ‘ಸರ್ಕಾರದ ವತಿಯಿಂದ ಈ ಆಚರಣೆ ನಡದೇ ತೀರುತ್ತದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರದ ಅನ್ವಯ ಗಣ್ಯರ ಹೆಸರು ಹಾಕಲಾಗುವುದು. ಬರುವುದು ಅಥವಾ ಬಿಡುವುದು ಅವರವರ ತೀರ್ಮಾನಕ್ಕೆ ಬಿಟ್ಟಿದ್ದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.  ‘ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ’ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಪತ್ರಕ್ಕೆ ರಾಜ್ಯದ ಸಚಿವರು ಮತ್ತು ಕಾಂಗ್ರೆಸ್‌ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಬಿಜೆಪಿ ನಾಯಕರ ನಿಲುವನ್ನು ಖಂಡಿಸಿದ್ದಾರೆ. ಬಿಜೆಪಿ ವಿರೋಧ: ‘ಯಾರಿಗೂ ಬೇಡವಾಗಿರುವ ಟಿ...

ಅಲ್ಲಾಹನನ್ನು ಬಿಟ್ಟು ಬೇರೆ ದೇವರನ್ನು ಮುಸ್ಲಿಂ ಮಹಿಳೆಯರು, ಪುರುಷರು ಪೂಜಿಸದಂತೆ ಫತ್ವಾ

Image
ನವದೆಹಲಿ:  ಮುಸ್ಲಿಂ ಮಹಿಳೆಯರಾಗಲಿ, ಪುರುಷರಾಗಲಿ ಅಲ್ಲಾ ಹೊರತು ಬೇರೆ ದೇವರನ್ನು ಪೂಜಿಸಕೂಡದು ಎಂದು ದಾರುಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿದೆ.  ವಾರಣಾಸಿಯಲ್ಲಿ ಮುಸ್ಲಿಂ ಮಹಿಳೆಯರು ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದರಿಂದ ಭಾರತದ ಇಸ್ಲಾಂ ಧರ್ಮ ಭೋದನೆಯ ಅತೀ ದೊಡ್ಡ ಕೇಂದ್ರವಾಗಿರುವ ದಾರುಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿದೆ.  ಅಲ್ಲಾನನ್ನು ಬಿಟ್ಟು ಬೇರೆ ದೇವರನ್ನೂ ಯಾರು ಪೂಜಿಸುತ್ತಾರೋ ಅವರು ಮುಸ್ಲಿಂರಾಗಿ ಉಳಿಯುವುದಿಲ್ ಎಂದು ದಾರುಲ್ ಉಲೂಮ್ ದೇವಬಂಧ್ ಫತ್ವಾದಲ್ಲಿ ಬರೆದಿದೆ.  ಸಾಮಾಜಿಕ ತಾಣಗಳಲ್ಲಿ ಫೋಟೋ ಹಾಕುವುದನ್ನು ಭಾರತೀಯ ಮುಸ್ಲಿಂರು ನಿಷೇಧಿಸಿ ಫತ್ವಾ ಹೊರಡಿಸಿದ ಬೆನ್ನಲ್ಲೇ ಈ ಫತ್ವಾ ಹೊರಡಿಸಲಾಗಿದೆ. 

ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲಿರುವ ವಾಟ್ಸ್ ಆಪ್

Image
ಸ್ಯಾನ್ ಫ್ರಾನ್ಸಿಸ್ಕೋ:  ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು ಆಯ್ಕೆ ಮಾಡುವ ವೈಶಿಷ್ಟ್ಯ ಲಭ್ಯವಾಗಲಿದೆ.  ಬೀಟಾ ವರ್ಷನ್ ನಲ್ಲಿ ಈ ಆಯ್ಕೆಯನ್ನು ಪರಿಶೀಲನೆಗೊಳಪಡಿಸಲಾಗುತ್ತಿದ್ದು, ಗ್ರೂಪ್ ಮ್ಯಾನೇಜ್ಮೆಂಟ್ ಸುಧಾರಣೆಗೂ ಹೆಚ್ಚು ಒತ್ತು ನೀಡಲಿದೆ, ಗ್ರೂಪ್ ಆಡ್ಮಿನ್ ಗಳು ಗ್ರೂಪ್ ಕ್ರಿಯೇಟರ್ ಗಳನ್ನು ಡಿಲೀಟ್ ಮಾಡುವುದನ್ನು ತಡೆಯುವ ಸೌಲಭ್ಯವೂ ಇರಲಿದೆಯಂತೆ.  ಇನ್ನು ಬಹು ನಿರೀಕ್ಷಿತ ಅನ್ ಸೆಂಡ್ ಆಯ್ಕೆಯೂ ಹೊಸ ಆವೃತ್ತಿಯಲ್ಲಿ ಲಭ್ಯವಾಗಲಿದ್ದು, ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದೆ 

ಜಿಲ್ಲೆಯ ಅಕ್ರಮ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪಿ.ವಿ ಮೋಹನ್ ಮತ್ತು ಲುಕ್ಮಾನ್ ರವರಿಂದ ಗೃಹ ಮಂತ್ರಿಗಳಿಗೆ ಮನವಿ

Image
ಬೆಂಗಳೂರು:  ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ತಾಂಡವವಾಡುತ್ತಿದ್ದು  ಡ್ರಗ್ಸ್ ಮಾಫಿಯ, ಗಾಂಜ ದಂದೆ,  ಗ್ಯಾಂಗ್ ವಾರ್ ,ಅನೈತಿಕವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ಗಳು ಜಿಲ್ಲೆಯ ಜನರ ನಿದ್ದೆಗೆಡಹಿದೆ. ಆದ್ದರಿಂದ ಇಂತಹ ಚಟುವಟಿಕೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ ಮೋಹನ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಲುಕ್ಮಾನ್ ಕರ್ನಾಟಕ ರಾಜ್ಯದ ಮಾನ್ಯ ಗೃಹ ಮಂತ್ರಿಗಳಾದ ರಾಮಲಿಂಗ ರೆಡ್ಡಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಗೃಹಸಚಿವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಜಿಲ್ಲೆಯ ಯುವಕರು, ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಮಾದಕ ಜಾಲದ ಮೋಹಕ್ಕೆ ಬಲಿಯಾಗಿ ಮಾದಕ ವ್ಯಸನಿಗಳಾಗಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಗಾಂಜಾ ದಂಧೆಯ ಕರಿನೆರಳ ಛಾಯೆ ಎದ್ದುಕಾಣುತ್ತಿದೆ. ಜಿಲ್ಲೆಯಾದ್ಯಂತ ಮಾದಕ ದ್ರವ್ಯಗಳು ಸುಲಭವಾಗಿ ಯುವಕರ, ವಿದ್ಯಾರ್ಥಿಗಳ ಕೈಗೆಟಕುತ್ತಿದೆ. ಶಾಲಾ ಕಾಲೇಜುಗಳ ಆವರಣದಲ್ಲಿಯೂ ಮಾರಾಟ ನಡೆಯುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿದೆ ಎಂದು ವಿವರಿಸಿದರು. ಈ ದಂದೆಯನ್ನು ಮತ್ತು ಇದರ ಹಿಂದಿರುವವರನ್ನು ಹತ್ತಿಕ್ಕುವ ಕೆಲಸ ಸರಕಾರ ನಡೆಸಬೇಕಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ ನಾರ್ಕೋ...

ಎಲ್ಲಾ ಪ್ರೇಮ ವಿವಾಹ ಲವ್ ಜಿಹಾದ್ ಅಲ್ಲ; ಅನೀಸ್ - ಶೃತಿ ಮದುವೆ 'ಮಾನ್ಯ': ಕೇರಳ ಹೈಕೋರ್ಟ್

Image
ಕೊಚ್ಚಿ:  ಎಲ್ಲಾ ಅಂತರ್ ಧರ್ಮೀಯ ಪ್ರೇಮ ವಿವಾಹಗಳನ್ನು ಲವ್ ಜಿಹಾದ್ ಎನ್ನಲು ಸಾಧ್ಯವಿಲ್ಲ ಎಂದಿರುವ ಕೇರಳ ಹೈಕೋರ್ಟ್, ಕಣ್ಣೂರು ನಿವಾಸಿಗಳಾದ ಶೃತಿ ಮತ್ತು ಅನೀಸ್ ಹಮೀದ್ ಅವರ ಅಂತರ್ ಧರ್ಮೀಯ ವಿವಾಹ ಮಾನ್ಯ ಎಂದು ಪರಿಗಣಿಸಿ ಪತಿಯೊಂದಿಗೆ ತೆರಳಲು ಪತ್ನಿ ಶೃತಿಗೆ ಗುರುವಾರ ಅನುಮತಿ ನೀಡಿದೆ. ಅನೀಸ್ - ಶೃತಿಯ ಅಂತರ್ ಧರ್ಮೀಯ ಮದುವೆ ಮಾನ್ಯತೆಯನ್ನು ಎತ್ತಿ ಹಿಡಿದ ವಿಭಾಗೀಯ ಪೀಠ, ಪ್ರೀತಿಗೆ ಯಾವುದೇ ಗಡಿರೇಖೆಗಳಿಲ್ಲದಿರುವುದರಿಂದ ಇಂತಹ ಮದುವೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದೆ. ಅನೀಸ್ ಶೃತಿಯನ್ನು ಬಲವಂತವಾಗಿ ಅಪಹರಿಸಿ, ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ಹೀಗಾಗಿ ಅವರ ಮದುವೆ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಅಕ್ಟೋಬರ್ 10ರಂದು ಹಾದಿಯಾ ಪ್ರಕರಣದ ವಿಚಾರಣೆಯ ವೇಳೆಯೂ ಎಲ್ಲಾ ಅಂತರ್ ಧರ್ಮೀಯ ವಿವಾಹಗಳನ್ನು ಲವ್ ಜಿಹಾದ್ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು

ಭಗವಾನ್ ರಾಮ ಬಿಜೆಪಿಯನ್ನು ಶಿಕ್ಷಿಸುತ್ತಾನೆ: ಲಾಲು ಪ್ರಸಾದ್

Image
ಪಾಟ್ನಾ:  ಭಗವಾನ್ ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಭಗವಾನ್ ರಾಮನೇ ಬಿಜೆಪಿಯನ್ನು ಶಿಕ್ಷಿಸುತ್ತಾನೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.  ರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದು ತಪ್ಪು ಹಾಗೂ ನೈತಿಕತೆಗೆ ವಿರುದ್ಧವಾದದ್ದು ಎಂದು ದೀಪಾವಳಿ ಸಂದರ್ಭದಲ್ಲಿ ಲಾಲು ಪ್ರಸಾದ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ರಾಮನ ಹೆಸರಿನಲ್ಲಿ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದು, ಪ್ರತಿಯೊಬ್ಬರಿಗೂ ತಮ್ಮ ಧರ್ಮ, ಸಂಪ್ರದಾಯಗಳನ್ನು ಪೂಜೆಗಳನ್ನು ಪಾಲಿಸಲು ಮುಕ್ತ ಅವಕಾಶವಿದೆ. ಆದರೆ ಬಿಜೆಪಿ ನಾಯಕರು, ಅದರಲ್ಲಿಯೂ ಪ್ರಮುಖವಾಗಿ ಯೋಗಿ ಆದಿತ್ಯನಾಥ್ ರಾಜಕೀಯ ನಾಟಕವಾಡುತ್ತಿದ್ದಾರೆ, ಜನತೆ ಅವರ ನಾಟಕವನ್ನು ಅರ್ಥಮಾಡಿಕೊಳ್ಳುತ್ತಾರೆ" ಎಂದಿದ್ದಾರೆ.   ನೋಟು ನಿಷೇಧಗೊಳಿಸಿ ಜನರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದ್ದರಿಂದ, ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರನ್ನು,  ಆರ್ ಎಸ್ಎಸ್ ಹಾಗೂ ಬಿಜೆಪಿಯನ್ನು ರಾಮನೇ ಶಿಕ್ಷಿಸುತ್ತಾನೆ, ಇದು ಶತಸಿದ್ಧ ಏಕೆಂದರೆ ರಾಮ ಭಾರತೀಯರ ಹೃದಯದಲ್ಲಿ ನೆಲೆಸಿದ್ದಾನೆ ಎಂದು ಲಾಲು ಪ್ರಸಾದ್ ಹೇಳಿದ್ದಾರೆ.

ಪಟಾಕಿ ಜತೆ ಆಜಾನ್ ಹೋಲಿಸಿದ ತ್ರಿಪುರಾ ರಾಜ್ಯಪಾಲ: ವಿವಾದ

Image
ಅಗರ್ತಲ:  ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ಅವರು ಧ್ವನಿವರ್ಧಕಗಳಲ್ಲಿ ‘ಆಜಾನ್’ ಹೇಳುವುದರ ಜತೆ ಹೋಲಿಕೆ ಮಾಡಿದ್ದು ವಿವಾದಕ್ಕೆ ಗುರಿಯಾಗಿದೆ. ಪಟಾಕಿ ಸಿಡಿಸುವ ವಿಚಾರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ‘ಪ್ರತಿ ದೀಪಾವಳಿ ಸಂದರ್ಭದಲ್ಲಿಯೂ ಪಟಾಕಿಗಳಿಂದ ಶಬ್ದ ಮಾಲಿನ್ಯವಾಗುತ್ತದೆ ಎಂಬ ವಿವಾದ ಶುರುವಾಗುತ್ತದೆ. ಆದರೆ, ಮುಂಜಾನೆ 4.30ಕ್ಕೆ ಕೇಳಿಬರುವ ಆಜಾನ್ ಬಗ್ಗೆ ವಿವಾದವಾಗುವುದಿಲ್ಲ’ ಎಂದಿದ್ದಾರೆ. ಆಜಾನ್‌ನಿಂದ ಶಬ್ದ ಮಾಲಿನ್ಯವಾಗುವ ಬಗ್ಗೆ ಜಾತ್ಯತೀತವಾದಿಗಳು ಸುಮ್ಮನಿರುವ ಬಗ್ಗೆ ಉಲ್ಲೇಖಿಸಿದ ಅವರು, ಧ್ವನಿವರ್ಧಕ ಬಳಸಬೇಕೆಂದು ಕುರ್‌ ಆನ್‌ನಲ್ಲಿ ಹೇಳಿಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಿರ್ಬಂಧ ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಅವರು ಈ ಟ್ವೀಟ್ ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಜ್ಯಪಾಲರ ಟ್ವಿಟರ್ ಸಂದೇಶಕ್ಕೆ ಅನೇಕ ಮಂದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಜೀನ್ಸ್ ಧರಿಸಿದ್ದಕ್ಕೆ ಟ್ರೋಲ್‌ಗೆ ಗುರಿಯಾದ ಮಲಾಲ

Image
ಬ್ರಿಟನ್ :  ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ತೆರಳಿರುವ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ ಅವರು ಜೀನ್ಸ್ ತೊಟ್ಟು, ಬೂಟು ಧರಿಸಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಮಲಾಲ ಅವರು ಒಂದು ವಾರದ ಹಿಂದೆ  ತತ್ವಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳ ಅಧ್ಯಯನ  ಮಾಡಲು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ . ಈ ವೇಳೆ ಮಲಾಲಾ ಅವರು  ಜೀನ್ಸ್ , ಬಲು ಎತ್ತರದ ಬೂಟು ಹಾಗೂ ಬಾಂಬರ್ ಜಾಕೆಟ್ ಹಾಕಿಕೊಂಡು ನಡೆದು ಹೋಗುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೊಮ್ಮೆ ಅವಳ ಹಣೆಗೆ ಗುಂಡೇಟು ತಗುಲಲು ಇದೇ ಕಾರಣ ಎಂದು ಮೊಹಮ್ಮದ್ ವಖಾಸ್ ಅವಾನ್ ಎಂಬುವರು ಟ್ವೀಟ್ ಮಾಡಿದ್ದಾರೆ.  ಮಲಾಲ ಅವರು ನಾಟಕದ ರಾಣಿ. ಇದನ್ನು ಆಕೆ ಅವರ ತಂದೆಯಿಂದ ‌ಕಲಿತಿದ್ದಾಳೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ತಾಲಿಬಾನ್ ವಿರೋಧಿಸಲಿಲ್ಲ. ಆದರೆ ತಾಲಿಬಾನರಿಗೆ ಪಾಶ್ಚಾತ್ಯ ಸಂಸ್ಕೃತಿ ಬೇಕಾಗಿರಲಿಲ್ಲ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಮಲಾಲ ಅವರನ್ನು ಪಾಕಿಸ್ತಾನದ ರೂಪದರ್ಶಿ ಮಾಯಾ ಕಲೀಫಾ ಗೆ ಹೋಲಿಸಿದ್ದು, ಮಾಯಾ ಕಲೀಫಾ– 2 ಎಂದು ಕರೆದಿದ್ದಾರೆ. 

ವೈ ದಿಸ್ ಕೊಲವೆರಿ ಡಾ? ಜಯ್ ಶಾ ಕಂಪನಿ ಅವ್ಯವಹಾರ ಕುರಿತು ಬಿಜೆಪಿಗೆ ರಾಹುಲ್ ಟಾಂಗ್

Image
ನವದೆಹಲಿ :  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಸಂಬಂಧ  ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ, ರಾಜ್ಯ ಕಾನೂನು ಶಾ ಅವರಿಗೆ ಚೆನ್ನಾಗಿ ಸಹಾಯ  ಮಾಡುತ್ತಿದೆ. ಸ್ಟೇಟ್ ಲೀಗಲ್  ಹೆಲ್ಪ್ ಫಾರ್  ಶಾ ಜ್ಯಾದಾ, ವೈ ದಿಸ್ ವೈ ದಿಸ್ ಕೊಲವೆರಿ ಡಾ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. ಕೊಲೆವರಿ ಡಾ ಎಂಬದು ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ತಮಿಳು ಚಿತ್ರವೊಂದರ ಹಾಡಾಗಿದೆ. ಹಾಡಿನ ಜೊತೆಗೆ ವೆಬ್ ಪೋರ್ಟಲ್ ವೈರ್ ನಲ್ಲಿ ಅಮಿತ್ ಶಾ ಮತ್ತು ಜಯ್ ಶಾ ಬಗ್ಗೆ ಪ್ರಕಟವಾಗಿದ್ದ ವರದಿಯನ್ನು ಕೂಡ ಟ್ವೀಟ್ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಜೊತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ನಂಟು ಹೊಂದಿದ್ದಾರೆಂದು ಬಿಜೆಪಿ ಆರೋಪದ ನಂತರ ರಾಹುಲ್ ವಾಗ್ದಾಳಿ ನಡೆಸಿದ್ದಾರೆ

ಯುವರಾಜ್ ಸಿಂಗ್ ವಿರುದ್ಧ ಅತ್ತಿಗೆ ಆಕಾಂಕ್ಷಾರಿಂದ ಕೌಟುಂಬಿಕ ಹಿಂಸಾಚಾರ ಕೇಸ್

Image
ನವದೆಹಲಿ:  ಟೀಂ ಇಂಡಿಯಾ ಕ್ರಿಕೆಟಿಗ ಖ್ಯಾತ ಆಲ್‌ ರೌಂಡರ್‌ ಯುವರಾಜ್‌ ಸಿಂಗ್‌, ಆತನ ತಾಯಿ ಶಬ್ನಂ ಸಿಂಗ್‌ ಮತ್ತು ಸಹೋದರ ಜೋರಾವರ್‌ ಸಿಂಗ್‌ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.  ಯುವರಾಜ್ ಸಿಂಗ್ ಸಹೋದರ ಜೋರಾವರ್‌ ಪತ್ನಿ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್-10 ಸ್ಪರ್ಧಿ ಆಕಾಂಕ್ಷಾ ಶರ್ಮಾ ಬುಧವಾರ ಕೇಸ್ ದಾಖಲಿಸಿದ್ದು ಇದೇ ಅ.21ಕ್ಕೆ ನಿಗದಿಸಲಾಗಿದೆ.  ಇನ್ನೂ ಈ ಕೇಸಿನ ಬಗ್ಗೆ  ಯಾವುದೇ ಹೇಳಿಕೆಯನ್ನು ನೀಡಲು ಆಕಾಂಕ್ಷಾ ನಿರಾಕರಿಸಿದ್ದಾರೆ. ಆದರೆ ಆಕೆಯ ವಕೀಲೆ ಸ್ವಾತಿ ಸಿಂಗ್‌, ಕೇಸು ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ.  ಕೌಟುಂಬಿಕ ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಎಂದು ಅರ್ಥ ಅಲ್ಲ. ಅದು ಮಾನಸಿಕ ಮತ್ತು ಹಣಕಾಸು ಹಿಂಸೆಯನ್ನು ಕೂಡ ಒಳಗೊಂಡಿರುತ್ತದೆ. ಇದಕ್ಕೆ ಯುವರಾಜ್‌ ಸಿಂಗ್‌ ಕೂಡ ಸಾಥ್‌ ನೀಡಿದ್ದಾರೆ. ಜೋರಾವರ್‌ ಮತ್ತು ಆತನ ತಾಯಿ ನನ್ನ ಕಕ್ಷಿದಾರಳಿಗೆ ಹಿಂಸೆ ನೀಡಿದ್ದಾರೆ ಎಂದು ಸ್ವಾತಿ ಸಿಂಗ್ ತಿಳಿಸಿದ್ದಾರೆ. 

ತಾಜ್ ಮಹಲ್ ವಿವಾದ: ಪರಂಪರೆ ಬಿಟ್ಟು ಸಾಗಲಾಗದು- ಬಿಜೆಪಿ ಶಾಸಕನಿಗೆ ಪ್ರಧಾನಿ ಮೋದಿ ಚಾಟಿ

Image
ನವದೆಹಲಿ : ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲ, ದೇಶಕ್ಕೆ ಅದೊಂದು ಕಪ್ಪುಚುಕ್ಕೆ ಎಂಬ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಹೇಳಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರೋಕ್ಷ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.  ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಕೆಲ ದಿನಗಳ ಹಿಂದಷ್ಟೇ ತಾಜ್ ಮಹಲ್ ಕುರಿತಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಸಂಗೀತ್ ಸೋಮ್ ಅವರ ಹೇಳಿಕೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಸಂಗೀತ್ ಸೋಮ್ ಹೇಳಿಕೆ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರೂ ಕೂಡ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.  ಇಬ್ಬರೂ ನಾಯಕರ ಹೇಳಿಕೆಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆ ಆಯುರ್ವೇದ ಕುರಿತಾದ ಸಮಾರಂಭದಲ್ಲಿ ಪರೋಕ್ಷವಾಗಿ ಬಿಜೆಪಿ ನಾಯಕನ ಹೇಳಿಕೆಗೆ ಚಾಟಿ ಬೀಸಿರುವ ಪ್ರಧಾನಿ ಮೋದಿಯವರು, ದೇಶದ ಹಿರಿಮೆ ಹೆಚ್ಚಿುವ ಪರಂಪರೆಯನ್ನು ಹಾಗೂ ಇತಿಹಾಸವನ್ನು ಬಿಟ್ಟು ದೇಶ, ನಾವು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ನಮ್ಮ ಪರಂಪರೆ ಇತಿಹಾಸದ ಬಗ್ಗೆ ಹೆಮ್ಮೆ ಪಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಕಾಲಕ್ರಮೇಣ ನಾವು ನಮ್ಮತನವನ್ನು ಹಾಗೂ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ

ಗಾಂಜಾದಿಂದ ಉಳ್ಳಾಲದ ಯುವಜನತೆಯ ಬಾಳು ಹಾಳು

Image
ಮಂಗಳೂರು, ಅ.೧೬- ಉಳ್ಳಾಲದಲ್ಲಿ ಯುವಜನತೆಯ ಬಾಳನ್ನೇ ಗಾಂಜಾ ಜಾಲ ಹಾಳು ಮಾಡುತ್ತಿದೆ. ಇದರ ವಿರುದ್ಧ ಹೋರಾಡಿದ ಜುಬೈರ್ ಹತ್ಯೆಯನ್ನು ಖಂಡಿಸಿ  ಪ್ರತಿಭಟನೆಗೆ ಮುಂದಾದಲ್ಲಿ ಸಹಾಯಕ ಪೊಲೀಸ್ ಆಯುಕ್ತ ರಾಮ ರಾವ್ ಉದ್ದಟತನದಿಂದ ವರ್ತಿಸುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು. ಪೊಲೀಸ್ ಇಲಾಖೆಯ ವೈಫಲ್ಯದಿಂದ ಗಾಂಜಾ ಮಾಫಿಯಾ  ವಿರುದ್ಧ ಹೋರಾಡಿದ ಮುಕ್ಕಚ್ಚೇರಿಯ ಜುಬೈರ್ ಹತ್ಯೆಯಾಗಿದ್ದು, ಸಾರ್ವಜನಿಕರೆದುರೇ  ಬೀದಯಲ್ಲೇ ಹತ್ಯೆ ನಡೆಸಿರುವುದು ಪೊಲೀಸ್ ಇಲಾಖೆ ವಿಫಲತೆಯನ್ನು ತೋರಿಸುತ್ತದೆ ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿ ವತಿಯಿಂದ ನಿನ್ನೆ ಜುಬೈರ್ ಕುಟುಂಬಕ್ಕೆ ಗರಿಷ್ಠ ಪರಿಹಾರಕ್ಕೆ ಒತ್ತಾಯಿಸಿ, ಗಾಂಜಾ ಮಾರಾಟ ಜಾಲದ ವಿರುದ್ಧ  ಮುಕ್ಕಚ್ಚೇರಿ ಜಂಕ್ಷನ್‌ನಿಂದ ಉಳ್ಳಾಲ ನಗರದ ಮೈದಾನದವರೆಗೆ ಹಮ್ಮಿಕೊಂಡ ಪ್ರತಿರೋಧ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಜನಪ್ರತಿನಿಧಿಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸರು ವೈಯಕ್ತಿಕ ಕಾರಣವೆಂದು ಜುಬೈರ್ ಪ್ರಕರಣದ ಹಾದಿಯನ್ನೇ ತಪ್ಪಿಸುತ್ತಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತರು ಈವರೆಗೆ ಯಾವುದೇ ಗಾಂಜಾ ಪ್ರಕರಣ ಉಳ್ಳಾಲ ಠಾಣೆಯಲ್ಲಿಲ್ಲ ಅನ್ನುವ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಮಕ್ಕಳು ಗಾಂಜಾ ವ್ಯಸನಿಗಳಾದವರ ಕುರಿತು ಹೆತ್ತವರು ಪೊಲ...

ಭಾರತೀಯ ಮೂಲದ ಯುವಕ ಈಗ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್

Image
ಲಂಡನ್:  ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ ಅವರು ಒಂದು ವರ್ಷಗಳ ಹಿಂದೆ ತನ್ನ ಶಾಲಾ ಕೆಲಸದೊಂದಿಗೆ ಆನ್ ಲೈನ್ ರಿಯಲ್ ಎಸ್ಟೇಟ್ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ಹಲವು ಮನೆ, ಆಸ್ತಿಗಳ ಮಾರಾಟದ ಡೀಲ್ ಕುದಿರಿಸುತ್ತಿದ್ದ. ಅಕ್ಷಯ್ ಸ್ಥಾಪಿಸಿದ "doorsteps.co.uk" ಸಂಸ್ಥೆ ಈಗ 12 ಮಿಲಿಯನ್ ಪೌಂಡ್ ಬೆಲೆ ಬಾಳುತ್ತಿದ್ದು, ಈ ಮೂಲಕ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಅಲ್ಲದೆ ಅಕ್ಷಯ್ ಅವರ "doorsteps.co.uk" ಆರಂಭವಾಗಿ 16 ತಿಂಗಳಲ್ಲಿ ಬ್ರಿಟನ್ ನ 18ನೇ ಅತಿ ದೊಡ್ಡ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ. ತಾನು ಇದುವರೆಗೆ 100 ಮಿಲಿನಿಯನ್ ಪೌಂಡ್ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಿಸಿರುವುದಾಗಿ ಅಕ್ಷಯ್ ಹೇಳಿಕೊಂಡಿದ್ದಾರೆ. ತನ್ನ ಸಂಬಂಧಿಯೊಬ್ಬರಿಂದ ಕೇವಲ 7 ಸಾವಿರ ಪೌಂಡ್ ಸಾಲ ಪಡೆದು "doorsteps.co.uk" ಆರಂಭಿಸಿದ್ದ ಅಕ್ಷಯ್ ಈಗ 12 ಜನರಿಗೆ ಉದ್ಯೋಗ ನೀಡಿದ್ದಾರೆ.

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್

Image
ಮಂಗಳೂರು:  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಾದ್ಯಂತ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಸೋಮವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖಾದರ್ ಅವರು, ಮಂಗಳೂರಿನಲ್ಲಿ ಐದು, ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಒಂದು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದರು. ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ಮಂಗಳೂರಿನಲ್ಲಿ ಪ್ರತ್ಯೇಕ ಅಡುಗೆ ಮನೆ ಇರುತ್ತದೆ. ಉಳಿದ ಕಡೆಗಳಲ್ಲಿ ಕ್ಯಾಂಟೀನ್ ಕಟ್ಟಡದಲ್ಲಿ ಅಡುಗೆ ಮನೆಯೂ ಇರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳು ಸೇರಿ 171 ಸ್ಥಳಗಳಲ್ಲಿ ಒಟ್ಟು 246 ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

Image
ಬೆಂಗಳೂರು:  ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿಪಡೆಯುತ್ತಿದೆ, ದೇಶದ ಸ್ವಾತಂತ್ರ್ಯಕ್ಕೆ ಮೊದಲು ಹೋರಾಡಿದ್ದು ಟಿಪ್ಪು ಸುಲ್ತಾನ್ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಮಾಧ್ಯಮವೊಂದು ವರದಿ ಮಾಡಿದೆ.  ಅ.15 ರಂದು ಅರಮನೆ ಮೈದಾನದಲ್ಲಿ ನಡೆದ ಪಿಎಫ್ಐ ಸಮಾವೇಶದಲ್ಲಿ ಮಾತನಾಡಿರುವ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ, ಟಿಪ್ಪು ಸುಲ್ತಾನ್ ಕೊಡುಗೆಯ ಬಗ್ಗೆ ಮಾತನಾಡುವ ಭರಾಟೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, "ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ಮಾಡಿದ್ದು ಟಿಪ್ಪು ಸುಲ್ತಾನ್ ಗಾಂಧಿ, ಸುಭಾಷ್ ಏನು ಮಾಡಿಲ್ಲ". ಎಂದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ಮಾಡಿದ್ದು ಟಿಪ್ಪು ಸುಲ್ತಾನ್, ಸ್ವಾತಂತ್ರ್ಯಕ್ಕಾಗಿ ಟಿಪ್ಪು ತನ್ನ ಮಕ್ಕಳನ್ನು ಅಡವಿಟ್ಟಿದ್ದ, ಆದರೆ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರ ಮಕ್ಕಳನ್ನು ಅಡವಿಟ್ಟಿದ್ದರೆ? ಎಂದು ಪ್ರಶ್ನಿಸಿದ್ದು, ಟಿಪ್ಪು ಪ್ರತಿಮೆ ಕೆಂಪು ಕೋಟೆಯ ಮೇಲೆ ಇರಬೇಕಿತ್ತು ಎಂದು ಹೇಳಿದ್ದಾರೆ.  ದೇಶದಲ್ಲಿ ದನಗಳಿಗೆ ಗೌರವ ಇದೆ, ಜನರಿಗೆ ಇಲ್ಲ. ಕೇಂದ್ರ ಸರ್ಕಾರ  ದನಗಳ ಭಾರತ ಕಟ್ಟಲಿ, ನಾವು ಜನಗಳ ಭಾರತ ಕಟ್ಟುತ್ತೇವೆ ಎಂದು ಜ್ಞಾನ ಪ್ರಕಾಶ್ ಹೇಳಿದ್ದಾರೆ. 

ಕಾಂಗ್ರೆಸ್‌ಗೆ ಪುನಶ್ಚೇತನ, ಬಿಜೆಪಿಯ ಪತನ ಶುರು: ಅಮರೀಂದರ್ ಸಿಂಗ್

Image
ಚಂಢಿಗಡ್(ಪಂಜಾಬ್):  ಪಂಜಾಬ್ ರಾಜ್ಯದ ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸುವ ಮೂಲಕ ಪಕ್ಷ ಪುನಶ್ಚೇತನ ಪಡೆಯುತ್ತಿದ್ದು ಬಿಜೆಪಿ ಕೆಳಗಿಳಿಯುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.  ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಗೆ ಭಾರೀ ಹಿನ್ನೆಡೆಯಾಗುತ್ತಿದ್ದ ಗುರುದಾಸ್ ಪುರ ಮತ್ತು ಕೇರಳದಲ್ಲಿನ ಗೆಲುವು ಪಕ್ಷಕ್ಕೆ ಚೇತರಿಕೆ ತಂದುಕೊಟ್ಟಿದೆ. ಇದು ಸಂತೋಷದ ವಿಷಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.  ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಶೇಖಡ 2.7ರಷ್ಟು ಮತಗಳನ್ನು ಗಳಿಸಿತ್ತು ಆದರೆ ಈ ಬಾರಿ ಅದನ್ನು ಎಎಪಿ ಕಳೆದುಕೊಂಡಿದೆ. ಈ ಚುನಾವಣೆಯ ಗೆಲುವು ಬದಲಾವಣೆಯನ್ನು ಎತ್ತಿ ತೋರಿಸುತ್ತಿದೆ ಎಂದರು.  ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ಟಿ) ಜಾರಿಯಿಂದ ವ್ಯಾಪಾರಸ್ಥರು ನೊಂದಿದ್ದಾರೆ. ಇನ್ನು ನೋಟು ನಿಷೇಧದಿಂದ ಬೇಸತ್ತಿರುವ ಮತದಾದರು ಈ ಬಾರಿ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ ಎಂದು ಅಮರೀಂದರ್ ಸಿಂಗ್ ಹೇಳಿದರು. 

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

Image
ಗುರುದಾಸ್ ಪುರ:  ಪಂಜಾಬ್ ರಾಜ್ಯದ ಗುರುದಾಸ್ ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆ ಫ‌ಲಿತಾಂಶ ಭಾನುವಾರ ಪ್ರಕಟಗೊಂಡಿದ್ದು,ಆಡಳಿತಾರೂಢ ಕಾಂಗ್ರೆಸ್ ಜಯ ಕಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ 1,93,219 ಮತಗಳಿಂದ ಜಯ ಸಾಧಿಸಿದ್ದಾರೆ.  ಜಖರ್ ಬಿಜೆಪಿ ಅಭ್ಯರ್ಥಿ ಸ್ವರನ್ ಸಲರಿಯಾ ಅವರನ್ನು ಸೋಲಿಸಿದ್ದಾರೆ.  ಬಿಜೆಪಿ ಸಂಸದ ಚಿತ್ರನಟ ವಿನೋದ್‌ ಖನ್ನಾ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು, ಆಪ್‌ 3 ನೇ ಸ್ಥಾನ ಪಡೆದುಕೊಂಡಿದೆ.  12 ಸುತ್ತುಗಳ ಮತ ಎಣಿಕೆ ನಂತರ ಎಲ್ಲಾ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಸುನಿಲ್ ಜಖರ್ , ಭಾರೀ ಮತಗಳಿಂದ ಗೆಲ್ಲಿಸಿದ ಮತದಾರರನ್ನು ಮತ್ತು ಬೆಂಬಲಿಸಿದ ಪಕ್ಷದ ಮುಖಂಡರಿಗೆ ಧನ್ಯವಾದ ಹೇಳಿದ್ದಾರೆ. ಈ ಗೆಲುವಿನಿಂದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಾಯಕತ್ವದ ಮೇಲೆ ಜನತೆಗೆ ನಂಬಿಕೆಯಿದೆ ಎಂಬುದು ಸಾಬೀತಾಗಿದೆ. ಇದು ಕಾಂಗ್ರೆಸ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಗೆಲುವು ಎಂದು ಜಖರ್ ಖುಷಿಯಿಂದ ಹೇಳಿಕೊಂಡಿದ್ದಾರೆ. ಪಂಜಾಬ್‌ನಾದ್ಯಂತ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಭಾರೀ ಸಂಭ್ರಮಾಚಾರಣೆಯಲ್ಲಿ ತೊಡಗಿದ್ದಾರೆ.  ಈ ಮಧ್ಯೆ ಕೇರಳದ ವೆಂಗರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತಾ ರೂಢ ಎಡಪಕ್ಷ ಮತ್ತು ಬಿಜೆಪಿ ಮುಖಭಂಗ ಅನುಭವ...

ಬ್ಲೂವೇಲ್ ಆಟದ ಬೆಚ್ಚಿ ಬೀಳಿಸುವ ಸಂಪೂರ್ಣ ವಿವರ

Image
ಏನಿದು ಬ್ಲೂವೇಲ್  ? ಇದು ಮಕ್ಕಳನ್ನು ಹಿಂಸಿಸಿ ಬಲಿ ಪಡೆಯುವ ಆಟ, ಇದು ಡೌನ್ಲೋಡ್ ಮಾಡಿಕೊಳ್ಳಬಹುದಾದ ಆಟವಲ್ಲ, ಇದೊಂದು ಆಪ್ ಅಥವಾ ಸಾಫ್ಟವೇರ್ ಕೂಡ ಅಲ್ಲ, ಸದಾ  ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಳ್ಳುವ ಮಕ್ಕಳನ್ನು ಲಿಂಕ್‌ಗಳ ಮೂಲಕ ಸೆಳೆದು ಬಲಿಪಡೆಯುವ ಆಟ ಎಂದರೆ ತಪ್ಪಗಲಾರದು. ಬ್ಲೂವೇಲ್ ಹುಟ್ಟು ರಷ್ಯಾದ ಮನಃಶಾಸ್ತ್ರ ವಿದ್ಯಾರ್ಥಿ ಫಿಲಿಪ್ ಬುಡೆಕಿನ್ ಎಂಬಾತ ಬ್ಲೂವೇಲ್ ಎಂಬ ಮಾರಣಾಂತಿಕ ಆಟವನ್ನು ಹುಟ್ಟುಹಾಕಿದ. ಕಾಲೇಜಿಂದ ಹೊರದಬ್ಬಿಸಿಕೊಂಡ ಫಿಲಿಪ್ ಹೇಳಿದ್ದು ಭಯಾನಕವಾಗಿದೆ, ಸಮಾಜದ ಅನಗತ್ಯ ಜೀವಗಳನ್ನು ಹೊಸಕಿ ಹಾಕುವುದೇ ಈ ಆಟದ ಹುಟ್ಟಿನ ಮೂಲ ಉದ್ದೇಶ’ ಎಂದಿದ್ದ! ಇತ್ತೀಚೆಗೆ ೧೭ ವರ್ಷದ ರಷ್ಯಾದ ವಿದ್ಯಾರ್ಥಿನಿಯನ್ನು ಬಂಧಿಸಲಾಯಿತು. ಈ ಮಾರಣಾಂತಿಕ ಆಟದ ಹಿಂದಿರುವ ಮಾಸ್ಟರ್ಮೈಂಡ್ ಇವಳೇ ಅಂತೆ! ಈ ಸ್ಫರ್ಧೆಯಲ್ಲಿ ಪಾಲ್ಗೊಂಡ ಮೊದಲ ಸ್ಪರ್ಧಿಯೂ ಆಗಿರುವ ಈಕೆ, ತಮ್ಮ ದೇಹಕ್ಕೆ ತಾವೇ ನೋವು ಮಾಡಿಕೊಂಡು ಸೈಕೋ ಥ್ರಿಲ್ ಹುಟ್ಟಿಸುವ ೫೦ ಚಾಲೆಂಜ್ಗಳ ಸೃಷ್ಟಿಕರ್ತೆಯೂ ಹೌದು. ಇದೇ ಹೆಸರೇಕೆ? ಕೆಲವೇ ಕೆಲವು ಸನ್ನಿವೇಶಗಳಲ್ಲಿ ನೀಲಿ ತಿಮಿಂಗಿಲಗಳು ತಾವಾಗೇ ತೀರಕ್ಕೆ ಬಂದು ಬಿದ್ದು ಸಾವನ್ನಪ್ಪುತ್ತವೆ. ಒಂದು ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತೆ! ಇದರ ಅನುಸಾರ ತಮ್ಮನ್ನು ತಾವೇ ನೋಯಿಸಿಕೊಂಡು ಸಾಯಿಸಿಕೊಳ್ಳುವ ಆಟಕ್ಕೆ ಬ್ಲೂವೇಲ್ ಎಂದು ಹೆಸರಿಡಲಾಗಿದೆ. ಮೂಲವೆಲ್ಲಿದೆ? ರಷ್ಯಾದಲ್ಲಿ ಹುಟ್ಟಿದ ಈ ಜ...

ರೋಹಿಂಗ್ಯಾಗಳ ಗಡಿಪಾರಿಗೆ ಸುಪ್ರೀಂ ತಡೆ

Image
ಹೊಸದಿಲ್ಲಿ:  ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯು ಅತ್ಯಂತ ಗಂಭೀರವಾದುದಾಗಿದ್ದು, ಮಾನವೀಯತೆ ಮತ್ತು ರಾಷ್ಟ್ರೀಯ ಭದ್ರತೆ ವಿಚಾರಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರಕಾರ ಮಹತ್ವದ ಪಾತ್ರ ವಹಿಸಬೇಕೆಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದೇ ವೇಳೆ ನವೆಂಬರ್‌ 21ರಿಂದ ರೋಹಿಂಗ್ಯಾ ಪ್ರಕರಣದ ವಿಸ್ತೃತ ವಿಚಾರಣೆ ನಡೆಸುವುದಾಗಿ ತಿಳಿಸಿರುವ ನ್ಯಾಯಾಲಯ, ಅಲ್ಲಿಯವರೆಗೂ ನಿರಾಶ್ರಿತರನ್ನು ಗಡಿಪಾರು ಮಾಡದಂತೆ ಸರಕಾರಕ್ಕೆ ಮೌಖಿಕ ಆದೇಶ ನೀಡಿದೆ. ನ್ಯಾಯಾಲಯ ಈ ವಿಚಾರವಾಗಿ ಲಿಖಿತ ಆದೇಶ ನೀಡಿದರೆ, ಅದು ಅಂತಾರಾಷ್ಟ್ರೀಯ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂಬ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಕಳವಳದ ಮೇರೆಗೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿತು. ಯಾವುದೇ ತುರ್ತು ಸಂದರ್ಭಗಳಲ್ಲಿ ನ್ಯಾಯಾಲಯದ ಬಾಗಿಲು ತಟ್ಟಲು ರೋಹಿಂಗ್ಯಾಗಳಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿತು. ''ಮುಂದಿನ ವಿಚಾರಣೆ ದಿನಾಂಕದ ಒಳಗಾಗಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದರೆ, ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು,'' ಎಂದು ನ್ಯಾಯಪೀಠ ಹೇಳಿತು. ರೋಹಿಂಗ್ಯಾಗಳ ಪರ ವಿಚಾರಣೆಗೆ ಹಾಜರಾದ ಹಿರಿಯ ನ್ಯಾಯವಾದಿ ಫಾಲಿ ಎಸ್‌ ನಾರಿಮನ್‌ ಅವರು ''ಎಲ್ಲಾ ರೋಹಿಂಗ್ಯಾ ಮುಸ್ಲಿಮರೂ ಭಯೋತ್ಪಾದಕರಲ್ಲ. ಸರಕಾರ ಸಾರಾಸಗಟಾಗಿ ಅವರನ್ನು ಗಡಿಪಾರು ಮಾಡ...

ವಿಶ್ವದೆಲ್ಲೆಡೆ ಈಗ 5ಜಿ ಧ್ಯಾನ

Image
ಕಣ್ಣು ಮಿಟುಕಿಸುವುದರೊಳಗೆ ಡೌನ್‌ಲೋಡ್‌ ಆಗುವ ಫೈಲ್‌ಗಳು, ಕ್ಷಣಾರ್ಥದಲ್ಲಿ ಲೋಡಿಂಗ್‌ ಆಗುವ ವೆಬ್‌ಪೇಜ್‌ಗಳು, ಯಾವುದೇ ತಾಂತ್ರಿಕ ಅಡಚಣೆ ಎದುರಾಗದೆ, ಮಧ್ಯದಲ್ಲಿ ಸ್ಥಗಿತಗೊಳ್ಳದೆ ಚಾಲನೆಗೊಳ್ಳುವ ಲೈವ್‌ ವಿಡಿಯೊಗಳು, ಬ್ರೌಸರ್‌ನಲ್ಲಿ ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳನ್ನು ತೆರೆದಿಟ್ಟು ಕೆಲಸ ಮಾಡುತ್ತಿದ್ದರೂ, ಯಾವ ಪುಟವೂ ಸ್ಥಗಿತಗೊಳ್ಳದೆ ಸರಾಗವಾಗಿ ಕೆಲಸ ಮಾಡಬಹುದಾದ ತಂತ್ರಜ್ಞಾನ. ಒಂದು ಆಕ್ಸೆಸ್‌ ಪಾಯಿಂಟ್‌ನಿಂದ (ಎಪಿ) ಗರಿಷ್ಠ ಸಂಖ್ಯೆಯಲ್ಲಿ ವೈ–ಫೈ ಇಂಟರ್‌ನೆಟ್ ಸಂಪರ್ಕ ಪಡೆದುಕೊಳ್ಳಬಹುದಾದ ಸೌಲಭ್ಯ. ಹೌದು. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನು 3 ವರ್ಷಗಳಲ್ಲಿ ಅಂದರೆ 2020ರ ವೇಳೆಗೆ, ಐದನೆಯ ತಲೆಮಾರಿನ ನಿಸ್ತಂತು ಸೇವೆ 5ಜಿ ದೇಶವ್ಯಾಪಿಯಾಗಿ ಬಳಕೆಗೆ ಬರಲಿದೆ. ದೇಶದಲ್ಲಿ 10 ವರ್ಷಗಳಿಗೊಮ್ಮೆ ಹೊಸ ತಲೆಮಾರಿನ ತರಂಗಾಂತರ ಸೇವೆ ಜಾರಿಗೆ ಬರುತ್ತಿದೆ. ಒಂದನೆಯ ತಲೆಮಾರಿನ ತರಂಗಾಂತರ ಅಂದರೆ 1ಜಿ ಬಂದಿದ್ದು 1982ರಲ್ಲಿ. ನಂತರ 1992ರಲ್ಲಿ 2ಜಿ ಬಂತು. ಬಹುನಿರೀಕ್ಷಿತ 3ಜಿ ತಂತ್ರಜ್ಞಾನ ಬಳಕೆಗೆ ಬಂದಿದ್ದು 2001ರಲ್ಲಿ. ಸದ್ಯ ನಾವು ಬಳಸುತ್ತಿರುವ 4ಜಿ ಇಂಟರ್‌ನೆಟ್‌ ತಂತ್ರಾಂಶ ಸಂಪೂರ್ಣವಾಗಿ ಜಾರಿಗೆ ಬಂದಿದ್ದು 2012ರಲ್ಲಿ. ಇದಾಗಿ 5 ವರ್ಷ ಕಳೆಯುವುದರೊಳಗೆ 5ಜಿ ಸುದ್ದಿ ಕೇಳಿಸುತ್ತಿದೆ. ಈಗಿನ್ನೂ ಕಣ್ಣು ಬಿಡುತ್ತಿರುವ ಈ ತಂತ್ರಜ್ಞಾನ ಸಂಪೂರ್ಣವಾಗಿ ಅಭಿವೃದ್ಧಿಗೊಂಡು ಜಾರಿಗೆ ಬರಲು ಇನ್ನೂ 3 ವರ್...