TEAM RDX ವತಿಯಿಂದ ಇಫ್ತಾರ್ ಕೂಟ
ಮಂಗಳೂರು : ಮಂಗಳೂರಿನ ಪ್ರಖ್ಯಾತ TEAM RDX ವತಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಸಾದುದ್ದೀನ್ ರವರ ನೇತೃತ್ವದಲ್ಲಿ ಬೋಳಾರ್ ಶಾದಿ ಮಹಲಿನಲ್ಲಿ ಇಫ್ತಾರ್ ಕೂಟದಲ್ಲಿ ಆಯೋಜಿಸಲಾಗಿತ್ತು.
ಸಂಜೆ ನಡೆದಂತಹ ಇಫ್ತಾರ್ ಕೂಟದ ಮುಖ್ಯ ಅಥಿತಿಗಳಾಗಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಲುಕ್ಮಾನ್, ಮಾನವ ಹಕ್ಕು ಆಯೋಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ದಿನಕರ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಶಿಪಲ್ ರಾಜ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ರವೂಫ್ ಸಿ.ಎಂ, ಮಂಗಳೂರು ದಕ್ಷಿಣ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಶೈಲೇಶ್ ಕೊಟ್ಟಾರಿ, ಮಂಗಳೂರು ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಕಾರ್ತಿಕ್ ರಾಜ್,ಜಿಲ್ಲಾ ಕಾರ್ಯದರ್ಶಿಯಾಗಿರುವ ಸೌಹಾನ್, ಮುನಾವರ್ ಪಡಿಲ್, ಶಾಫಿ ಕೈಕಂಬ, ನ್ಯೂಸ್ ಹಂಟ್ನ ಮನ್ಸೂರ್ ಮತ್ತು TEAM RDX ನ ಸರ್ವ ಸದಸ್ಯರು ಮತ್ತು ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



Comments
Post a Comment