ಪತ್ರಕರ್ತೆ, ಚಿಂತಕಿ, ಸಾಹಿತಿ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ
ಬೆಂಗಳೂರು: ಪತ್ರಕರ್ತೆ, ಚಿಂತಕಿ, ಸಾಹಿತಿ ಗೌರಿ ಲಂಕೇಶ್ (55) ಅವರ ಮೇಲೆ ಗುಂಡು ಹಾರಿಸಿ ಮಂಗಳವಾರ ರಾತ್ರಿ ಹತ್ಯೆ ಮಾಡಲಾಗಿದೆ. ರಾಜರಾಜೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನೆರೆಹೊರಯವರ ಪ್ರಕಾರ, ಸುಮಾರು ರಾತ್ರಿ 8.25ಕ್ಕೆ ಮೋಟಾರ್ ಸೈಕಲ್‌ನಲ್ಲಿ ಬಂದ ಮೂರು ಮಂದಿ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರ ಕಡೆಗೆ ಗುಂಡು ಹಾರಿಸಿದ್ದಾರೆ. ಆ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರು ಗೇಟಿನ ಬಳಿ ನಿಂತಿದ್ದರು. ಅವರ ಕುತ್ತಿಗೆ ಮತ್ತು ಎದೆಗೆ ಗುಂಡು ತಗುಲಿದ್ದು ಸ್ಥಳದಲ್ಲೇ ಗೌರಿ ಲಂಕೇಶ್ ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಖಚಿತಪಡಿಸಿದ್ದು ಘಟನಾ ಸ್ಥಳಕ್ಕೆ ಆಗಮಿಸುತ್ತಿರುವುದಾಗಿ ವಿಜಯಕರ್ನಾಟಕಕ್ಕೆ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಗೌರಿ ಲಂಕೇಶ್ ಅವರ ಸಹೋದರ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಶಾಕ್ ಆಗಿದ್ದು ಈ ಬಗ್ಗೆ ತತ್ ಕ್ಷಣಕ್ಕೆ ತಮಗೇನು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ಸಂಶೋಧಕ, ಚಿಂತಕ ಎಂ.ಎಂ ಕಲ್ಬುರ್ಗಿ, ಹಿರಿಯ ಸಿಪಿಐಎಂ ನಾಯಕ, ವಿಚಾರವಾದಿ ಕಾಮ್ರೇಡ್ ಗೋವಿಂದ ಪನ್ಸಾರೆ ಹಾಗೂ ವಿಚಾರವಾದಿ, ಹಿರಿಯ ಪತ್ರಕರ್ತ ನರೇಂದ್ರ ಧಾಬೋಲ್ಕರ್ ಅವರನ್ನೂ ಇದೇ ರೀತಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೀಗ ಗೌರಿ ಲಂಕೇಶ್ ಅವರನ್ನೂ ಇದೇ ರೀತಿ ಹತ್ಯೆ ಮಾಡಲಾಗ...