ರೈತರ ಸಾಲಮನ್ನಾ ಮಾಡಿದ ಪಂಜಾಬ್ ಕಾಂಗ್ರೆಸ್ ಸರಕಾರ
ಚಂಡಿಗಢ: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸಣ್ಣ ಮತ್ತು ಮಧ್ಯಮ ವರ್ಗದ ( (5 ಎಕರೆ ವರೆಗೆ) ರೈತರಿಗೆ ರೂ.2 ಲಕ್ಷದ ವರೆಗೆ ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಿದ್ದಾರೆ. ಸಾಲದ ಮೊತ್ತದ ಲೆಕ್ಕಕ್ಕೆ ಹೊರತಾಗಿ ಇತರೆ ಎಲ್ಲ ಮಧ್ಯಮ ವರ್ಗದ ರೈತರಿಗೆ ರೂ.2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ರೈತರ ಸಾಲಮನ್ನಾ ಮಾಡುತ್ತಿರುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ ಅವರು ತಮ್ಮ ಈ ನಿರ್ಧಾರದಿಂದ ಪಂಜಾಬ್‍ನ 5 ಎಕರೆ ಜಮೀನುಳ್ಳ 8.75 ಲಕ್ಷ ರೈತರು ಸೇರಿದಂತೆ 10.25 ಲಕ್ಷ ರೈತರಿಗೆ ಲಾಭವಾಗಲಿದೆ ಎಂದಿದ್ದಾರೆ. ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸರಕಾರగಳು ಘೋಷಿಸಿದ ಪರಿಹಾರ ಮೊತ್ತಕ್ಕಿಂತలూ ಇದು ದುಪ್ಪಟ್ಟು ಎಂದಿದ್ದಾರೆ ಅಮರಿಂದರ್. ತಮ್ಮ ಈ ನಿರ್ಧಾರವು ಖ್ಯಾತ ಆರ್ಥಶಾಸ್ತ್ರಜ್ಞ ಟಿ.ಹಕ್ ಅವರ 'ಎಕ್ಸ್‌ಪರ್ಟ್ ಗ್ರೂಪ್'ನ ಮಧ್ಯಂತರ ವರದಿಯನ್ನು ಆಧರಿಸಿದೆ ಎಂದಿದ್ದಾರೆ ಅಮರಿಂದರ್
ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರೂ.3ಲಕ್ಷಕ್ಕೆ ಬದಲಾಗಿ ರೂ.5 ಲಕ್ಷ ಪರಿಹಾರ ಧನ ನೀಡುವುದಾಗಿಯೂ ಘೋಷಿಸಿದ್ದಾರೆ. ರೈತರ ಸಾಲಮನ್ನಾ ಹಣವನ್ನು ಸಾಂಸ್ಥಿಕ ಸಂಪನ್ಮೂಲಗಳಿಂದ ಭರಿಸಲಾಗುತ್ತದೆ ಎಂದಿದ್ದಾರೆ.



Comments
Post a Comment