ರಕ್ತದಾನದ ಪ್ರಯೋಜನ ಏನು ಗೊತ್ತೇ?
ರಕ್ತಕ್ಕೆ 'ರಕ್ತ'ವೇ ಪರಾರಯಯ. ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ ಆದರೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ. ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು.
ಈ ನಿಟ್ಟಿನಲ್ಲಿ ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ. ಈ ಹಿನ್ನೆಲೆಯಲ್ಲಿ ರಕ್ತದಾನದಿಂದ ಆಗುವ ಉಪಯೋಗಗಳು, ಯಾರು ರಕ್ತದಾನ ಮಾಡಬಹುದು, ಯಾರು ಮಾಡುವಂತಿಲ್ಲ ಎಂಬುದರ ಕುರಿತು ಒಂದಿಷ್ಟು ಮಾಹಿತಿ.
ಯಾರು ರಕ್ತದಾನ ಮಾಡಬಹುದು?
*18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ
*ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 6 ತಿಂಗಳಿಗೊಮ್ಮೆ
*ಪುರುಷರ ತೂಕ 45 ಕೆ.ಜಿ. ಹಾಗೂ ಮಹಿಳೆಯರ ತೂಕ 50 ಕೆ.ಜಿ. ಇರಬೇಕು.
*ದಾನಿಗಳ ಸಿಸ್ಟಾಲಿಕ್ ರಕ್ತದ ಒತ್ತಡ 140 ಹಾಗೂ ಡಯಾಸ್ಟಾಲಿಕ್ ರಕ್ತದ ಒತ್ತಡ 70ರಿಂದ 100 ಇರಬೇಕು.
*ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5ಕ್ಕಿಂತ ಹೆಚ್ಚಿರಬೇಕು.
ಯಾರು ರಕ್ತದಾನ ಮಾಡುವಂತಿಲ್ಲ?
*ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದರೆ
*ಆಲ್ಕೋಹಾಲ್ ಅಥವಾ ಆ್ಯಂಟಿಬಯೋಟಿಕ್‌ಗಳನ್ನು ಸೇವಿಸಿದ 72 ಗಂಟೆಗಳವರೆಗೆ
*ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್ ಮಾಡಿಸಿಕೊಂಡಿದ್ದವರು ನಾಲ್ಕು ವಾರದವರೆಗೆ
*ಆಸ್ಪಿರಿನ್ ಮಾತ್ರೆ ಸೇವಿಸಿದ್ದರೆ, 3 ದಿನಗಳವರೆಗೆ ವೈದ್ಯೋಪಚಾರದಲ್ಲಿದ್ದರೆ, ಸ್ವತಃ ರಕ್ತಪಡೆದಿದ್ದರೆ, 3 ತಿಂಗಳ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಮಾಡುವಂತಿಲ್ಲ.
*ಜಾಂಡೀಸ್, ಡಯಾಬಿಟಿಕ್, ಕ್ಯಾನ್ಸರ್, ಹೆಪಟೈಟಿಸ್ ಬಿ ಮತ್ತು ಸಿ, ಹೃದ್ರೋಗ, ಅಸ್ವಾಭಾವಿಕ ರಕ್ತಸ್ರಾವ, ಸಕಾರಣವಿಲ್ಲದ ತೂಕ ಇಳಿಯುವಿಕೆ, ಕಿಡ್ನಿ-ಲಿವರ್ ಸಂಬಂಧಿ ಕಾಯಿಲೆ, ಬ್ರಾಂಕೈಟಿಸ್, ಮೂರ್ಛೆ ಕಾಯಿಲೆ ಹಾಗೂ ಮಾನಸಿಕ ಒತ್ತಡ ಮತ್ತು ಅಸ್ವಸ್ಥತೆ ಇದ್ದವರು, ಎಚ್‌ಐವಿ/ಏಡ್ಸ್ ಇರುವವರು ಮಾಡುವಂತಿಲ್ಲ.
ರಕ್ತದಾನದಿಂದ ಆಗುವ ಉಪಯೋಗಗಳೇನು?
*ಇತರರ ಜೀವ ಉಳಿಸಲು ಸಾಧ್ಯವಾಗುತ್ತದೆ.
*ಹೊಸರಕ್ತ ಉತ್ಪಾದನೆ ಆಗಲು ಸಾಧ್ಯವಾಗುತ್ತದೆ.
*ರಕ್ತದಾನದಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಶೇ. 80ರಷ್ಟು ಹೃದಯಾಘಾತ ಕಡಿಮೆ.
*ರಕ್ತದ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗುವ ತೊಂದರೆ ಸಮಸ್ಯೆಗಳು ಕಡಿಮೆ.
ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿಗಳ ಪರಿಚಯ
ರೆಡ್‌ಕ್ರಾಸ್ ಶಿಬಿರ ನಡೆಸಿ ಜನರಲ್ಲಿ ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದನ್ನು ಗಮನಿಸಿ ಒಮ್ಮೆ ರಕ್ತದಾನ ಮಾಡಿದೆ. ಆಗ ದೇಹದಲ್ಲಿ ಏನೋ ಒಂದು ಬದಲಾವಣೆ ಆದಂತಾಯಿತು. ಚಟುವಟಿಕೆ ಹಾಗೂ ಲವಲವಿಕೆ ಮೂಡಿತು. ಆಗಿನಿಂದ ರಕ್ತದಾನ ಮಾಡಿದರೆ ಬೇರೆಯವರಿಗೆ ಮಾತ್ರವಲ್ಲದೇ ನನಗೂ ಉಪಯೋಗ ಆಗುತ್ತದೆ ಎಂಬುದನ್ನು ಅರಿತು ರಕ್ತದಾನ ಮಾಡುತ್ತಿದ್ದೇನೆ. ಈವರೆಗೂ 35ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದೇನೆ.

Comments
Post a Comment