Posts

ಮಿತ್ತಬೈಲ್ ಜಬ್ಬಾರ್ ಉಸ್ತಾದ್ ನಿಧನಕ್ಕೆ ಬಿ.ಕೆ ಹರಿಪ್ರಸಾದ್ ತೀವ್ರ ಶೋಕ

Image
ಮಿತ್ತಬೈಲು ಉಸ್ತಾದ್ ಎಂದೇ ಖ್ಯಾತರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಹಾ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಜಬ್ಬಾರ್ ಉಸ್ತಾದರ ನಿಧನಕ್ಕೆ ರಾಜ್ಯಸಭಾ ಸದಸ್ಯರಾಗಿರುವ ಬಿ.ಕೆ ಹರಿಪ್ರಸಾದ್ ರವರು ತೀವ್ರ ಶೋಕ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕೋಮು ಸೌಹಾರ್ದತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಆಧ್ಯಾತ್ಮಿಕತೆ ಶಕ್ತಿಯ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಾ ಜಾತಿ, ಮತಗಳ ಭೇಧವಿಲ್ಲದೆ ಎಲ್ಲ ವರ್ಗದ ಜನರೊಂದಿಗೆ ಪ್ರೀತಿ-ವಿಶ್ವಾಸದೊಂದಿಗೆ ವ್ಯವಹರಿಸುತ್ತಿದ್ದ ಉಸ್ತಾದ್ ನಿಜಕ್ಕೂ ಜಿಲ್ಲೆಯ ಆಸ್ತಿಯಾಗಿದ್ದರು. ಇದೀಗ ಅವರ ನಿಧನವು ಜಿಲ್ಲೆಯ ಜನತೆಯ ಪಾಲಿಗೆ ಸಹಿಸಲಾರದ ನೋವನ್ನು ತಂದಿದೆ ಎಂದು ತಿಳಿಸಿದರು. ಭಗವಂತನು ಉಸ್ತಾದರ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ, ಅವರ ಅಭಿಮಾನಿಗಳಿಗೆ, ಸಮುದಾಯಕ್ಕೆ ಮತ್ತು ಸಮಾಜಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿ.ಕೆ ಹರಿಪ್ರಸಾದ್ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಶಸ್ವಿ ಸದ್ಭಾವನಾ ಉಪವಾಸ ಸತ್ಯಾಗ್ರಹ: ಲುಕ್ಮಾನ್

Image
ಮಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಶಾಂತಿ, ಸಹೋದರತೆ ಹಾಗೂ ಸಹಿಷ್ಣುತೆಗಾಗಿ ಮಂಗಳವಾರ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಮತ್ತು ನಾಡಿನ ಮತೀಯ ಸಾಮರಸ್ಯಕ್ಕಾಗಿ "ಸದ್ಭಾವನಾ ಉಪವಾಸ ಸತ್ಯಾಗ್ರಹ" ಕಾರ್ಯಕ್ರಮವನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭ ಧರ್ಮಸ್ಥಳ ಭೇಟಿ ನೀಡಿದ್ದಾಗ, ವಿಶೇಷ ವಿಮಾನದ ಮೂಲಕ ಕಾರಾಗಲಿ, ಹೆಚ್ಚುವರಿ ಹೆಲಿಕಾಪ್ಟರ್‌ಗಳಾಗಲಿ ಬಂದಿರಲಿಲ್ಲ, ಸರಳ ಜೀವನದ ಜತೆಗೆ ಬಡಜನರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸಿದಂತಹ ಇಂದಿರಾಗಾಂಧಿ ಅವರ ಕಾರ್ಯಚಟುವಟಿಕೆಗಳು ದೇಶಕ್ಕೆ ಮಾದರಿ ಎಂದು ಹೇಳಿದರು. ರಾಜ್ಯ ಸರಕಾರದ ಮುಖ್ಯಸಚೇತಕ ಐವನ್ ಡಿಸೋಜ ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವಾಭಿಮಾನದ ಬದುಕು ರೂಪಿಸಿದವರು. ತೊಕ್ಕೊಟ್ಟುವಿನಲ್ಲಿ ಅವರ ಪುಣ್ಯತಿಥಿಯ ಅಂಗವಾಗಿ ಆರಂಭಗೊಂಡ ಉಪವಾಸ ಕಾರ್ಯಕ್ರಮ ಪ್ರಪಂಚದಾದ್ಯಂತ ನಡೆಯಲಿ, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ ಎಂದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಉಪವಾಸ ಸತ್ಯಾಗ್ರಹವು ಸಂಜೆ 6 ಗಂಟೆಯ ವರೆಗೆ ನಡೆಯಿತು.ಈ ಕಾರ್ಯಕ್ರಮವು ಕೆಪಿಸಿಸಿ ಪ್ರ.ಕಾರ್ಯದರ್ಶಿ ಪಿ ವಿ ಮೋಹನ್ ರವರ ನೇತೃತ್ವದಲ್ಲಿ ನಡೆಯಿತು ಮತ್ತು ಇವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್ ರವರು ಬೆಂಬಲವಾಗಿ ನಿಂ...

ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ದೇಶ ಹುಟ್ಟಿದ್ದು ಹೇಗೆ???

Image
ಭಾರತದ ಉದ್ಯಮಿ ಜಮ್‌ಶೆಟ್‌ಜಿ ಟಾಟಾ ಅವರು 1873ರಲ್ಲಿ ಜೆರುಸಲೇಂಗೆ ಭೇಟಿ ನೀಡಿದ್ದರು. ಅಲ್ಲಿನ ಜನರು ತೋರುತ್ತಿದ್ದ ಧಾರ್ಮಿಕ ಅಂಧಶ್ರದ್ಧೆ ಕಂಡು ಅವರು ಹೌಹಾರಿದ್ದರು. ‘ಈ ರೀತಿ ಇರುವುದು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದರು. ‘ಜಗತ್ತಿನ ಇತರರಿಂತ ತಾವು ಶ್ರೇಷ್ಠರು ಎಂದು ಹೇಳಿಕೊಳ್ಳುತ್ತಿರುವವರು ಇಂತಹ ಹುಚ್ಚು ಮೂರ್ಖರೇ? ಅಥವಾ ಈ ಎಲ್ಲವನ್ನೂ ಅವರು ನಂಬುತ್ತಿದ್ದಾರೆ ಎಂದು ಹೇಳಿಕೊಳ್ಳುವಂತಹ ಆಷಾಢಭೂತಿಗಳೇ? ಅಥವಾ ಜೆರುಸಲೇಂನಲ್ಲಿ ಕಾಣಿಸಿಕೊಳ್ಳುವ ಈ ಅಸಂಗತ ಅಂಶಗಳು ನಿಜವಾದ ಭಕ್ತಿಯೇ’ ಎಂದು ಅವರು ಕೇಳಿದ್ದರು. ಅವರು ನಗರದ ಜನರ ಜತೆ ಮಾತನಾಡಿದ್ದರು. ‘ಅವರ ಮೂರ್ಖತನ, ಪಕ್ಷಪಾತಿ ತುಡಿತ, ಕಣ್ಣಿಗೆ ರಾಚುವ ಆಷಾಢಭೂತಿತನಗಳು ನೇರವಾದ ವಾಗ್ವಾದದಲ್ಲಿನ ಸಾಮಾನ್ಯ ಸಭ್ಯತೆಯನ್ನು ಮರೆಸಿಬಿಡಬಹುದು’ ಎಂದು ಜೆಮ್‌ಶೆಟ್‌ಜಿ ಅಭಿಪ್ರಾಯಪಟ್ಟಿದ್ದರು. ‘ಇಸ್ಲಾಂ ಧರ್ಮಕ್ಕೆ ಸೇರಿದ ಸ್ಥಳಗಳ ಪವಾಡ ಮತ್ತು ಪಾವಿತ್ರ್ಯದ ಬಗ್ಗೆ ಕ್ರೈಸ್ತ ಗೈಡ್‌ಗಳು ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ಸ್ಥಳಗಳ ಪಾವಿತ್ರ್ಯ ಮತ್ತು ಪವಾಡಗಳ ಬಗ್ಗೆ ಮುಸ್ಲಿಂ ಗೈಡ್‌ಗಳು ವಿವರಿಸುವಾಗ ಅವರ ಧ್ವನಿಯಲ್ಲಿ ಅಡಗಿರುವ ಅವಹೇಳನ ಮತ್ತು ಅನುಮಾನಗಳು ಗಮನಾರ್ಹ’ ಎಂದು ಅವರು ಹೇಳಿದ್ದರು. ಜೆಮ್‍ಶೆಟ್‌ಜಿ ಅವರು ಜೆರುಸಲೇಂಗೆ ಭೇಟಿ ನೀಡಿದ್ದಾಗ ಅಸಂಗತತೆ ಮತ್ತು ಆಷಾಢಭೂತಿತನಗಳನ್ನು ಪ್ರದರ್ಶಿದವರು ಮುಖ್ಯವಾಗಿ ಕ್ರೈಸ್ತರು. ಆದರೆ ಸ್ವಲ್ಪದರಲ್ಲಿಯೇ ಅದಕ್ಕೆ ಮತ್ತೊ...

ಸ್ಟಾರ್ಟ್ ಅಪ್ ಇಂಡಿಯಾ ಒಕೆ, ಶಟ್ ಅಪ್ ಇಂಡಿಯಾ ಯಾಕೆ?: ಮೋದಿಗೆ ರಾಹುಲ್ ಪ್ರಶ್ನೆ

Image
ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ದೇಶದ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಗುರುವಾರ ಆರೋಪಿಸಿದ್ದಾರೆ. ಇಂದು ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ದೇಶದ ಆರ್ಥಿಕತೆ ಚೇತರಿಕೆಗಾಗಿ ಸ್ಟಾರ್ಟ್ ಅಪ್ ಇಂಡಿಯಾವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಶಟ್ ಅಪ್ ಇಂಡಿಯಾ ಆಗಬಾರದು ಎಂದು ಹೇಳಿದ್ದಾರೆ. ಸರ್ಕಾರಕ್ಕೂ ಜನರ ಮೇಲೆ ನಂಬಿಕೆ ಇಲ್ಲ. ಜನರನ್ನು ಕಳ್ಳರಂತೆ ನೋಡುತ್ತಿದೆ. ಆದರೆ ಎಲ್ಲ ಹಣವು ಕಪ್ಪಲ್ಲ, ಎಲ್ಲ ಕಪ್ಪು ನಗದಲ್ಲ. ಪ್ರಧಾನಿ ಮೋದಿ ತಮ್ಮ ದೊಡ್ಡ ಎದೆ ಹಾಗೂ ಸಣ್ಣ ಹೃದಯದಿಂದ ಅಧಿಕಾರ ಬಳಕೆ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ವ್ಯಾಪಾರಸ್ಥರು ವಿಶ್ವಾಸದ ಮನಸ್ಥಿತಿಯಲ್ಲಿ ವ್ಯವಹಾರ ಮಾಡುತ್ತಾರೆ. ಆದರೆ ಈ ಸರ್ಕಾರದ ಮೇಲಿನ ವಿಶ್ವಾಸವೇ ಸತ್ತುಹೋಗಿದೆ. ಪ್ರಧಾನಿಗಳು ಹಾಗೂ ಸರ್ಕಾರ ಪ್ರತಿಯೊಬ್ಬರನ್ನು ಕಳ್ಳರಂತೆ ನೋಡುತ್ತಿದೆ. ಒಬ್ಬರ ಮಾತನ್ನು ಕೇಳಿಸಿಕೊಳ್ಳುವ ಮೂಲಕ ವಿಶ್ವಾಸವನ್ನು ಬೆಳೆಸಬಹುದು. ಆದರೆ ಇವತ್ತು ಸರ್ಕಾರದ ಯಾರೊಬ್ಬರು ಜನರ ನೋವು- ಸಂಕಷ್ಟವನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು. ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್ ...

ಸಮಾನ ಮನಸ್ಕ ಸಂಘಟನೆಗಳಿಂದ 5 ದಿನಗಳ ಸದ್ಭಾವನಾ ಉಪವಾಸ ಸತ್ಯಾಗ್ರಹ

Image
ಮಂಗಳೂರು : ಕರಾವಳಿ ಕರ್ನಾಟಕದಲ್ಲಿ ಕದಡಿ ಹೋಗಿರುವ ಸಮುದಾಯಗಳ ನಡುವಿನ ಸೌಹಾರ್ದ ಮತ್ತು ಸಹಕಾರಗಳನ್ನು ಮರುಪ್ರತಿಷ್ಠಾಪಿಸುವ ಸಲುವಾಗಿ ಐದು ದಿನಗಳ *"ಸದ್ಭಾವನಾ ಉಪವಾಸ ಸತ್ಯಾಗ್ರಹವನ್ನು"* ಹಮ್ಮಿಕೊಳ್ಳಲಾಗಿದೆ ಎಂದು ಇಂದು ಸಂಜೆ ಮಂಗಳೂರಿನ ವುಡ್ಲ್ಯಾಂಡ್ಸ್ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯರ್ಶಿಯಾದ ಪಿ.ವಿ ಮೋಹನ್ ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ ಕಾನೂನು ಕಟ್ಟಲೆಗಳನ್ನು ಅಣಕ ಮಾಡುವ ರೀತಿಯಲ್ಲಿ ಘಟನೆಗಳು ನಡೆಯುತಿದ್ದು, ಜನರ ವೈಯಕ್ತಿಕ ಬದುಕಿನ ಮೇಲಿನ ದಾಳಿಗಳನ್ನು ಅಲ್ಲಲ್ಲಿ ನೋಡುತ್ತಿದ್ದೇವೆ. ಜಾತೀಯವಾದ, ಧಾರ್ಮಿಕ ಅಸಹಿಷ್ಣುತೆ, ಮತಾಂದತೆ ಹಾಗೂ ಪ್ರತ್ಯೇಕತಾ ಮನೋಭಾವಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ನಿರಾಶದಾಯಕವಾದ ಮತ್ತು ಹಿಂಸೆಯಿಂದ ರಾರಾಜಿಸುವ ಸನ್ನಿವೇಶದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಒಲವು, ನಿಲುವುಗಳನ್ನು ಮತ್ತೆ ಮರು ಸಂಘಟಿಸುವ ಅಗತ್ಯವಿದೆ ಅಲ್ಲದೆ ನಮ್ಮ ಸ್ವಾತಂತ್ರ್ಯ ಹೋರಾಟದ ಧ್ಯೇಯೋದ್ದೇಶಗಳಾಗಿದ್ದ ಪ್ರಜಾತಂತ್ರ, ಸೆಕ್ಯೂಲರ್ ವಾದ, ಸಾಮಾಜಿಕ ನ್ಯಾಯ ಮತ್ತು ಬಹು ಸಂಸ್ಕೃತಿಯನ್ನು ಜನ ಸಮುದಾಯದಲ್ಲಿ ಮತ್ತೆ ಹುಟ್ಟುಹಾಕುವ ಸಲುವಾಗಿ *ಜಿಲ್ಲೆಯ 5 ಬೇರೆ ಬೇರೆ ನಗರಗಳಲ್ಲಿ ಅಕ್ಟೋಬರ್ 31 ರಿಂದ ಡಿಸೆಂಬರ್ 6ರ ವರೆಗೆ 5 ದಿನಗಳ ಸದ್ಭಾವನಾ ಉಪವಾಸ ಸತ್ಯಾಗ್ರಹವು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದ್ದು*...

ಬಲ್ಮಟ್ಟಾದಲ್ಲಿ ಗಾಂಜಾ ಮಾರಾಟ ಮಾಡುತಿದ್ದ 3 ವಿದ್ಯಾರ್ಥಿಗಳ ಬಂಧನ

Image
ಮಂಗಳೂರು: ಅಕ್ಟೋಬರ್ 23 ರಂದು ಬಾಲ್ಮಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗ್ಯಾಂಜವನ್ನು ಮಾರಾಟ ಮಾಡುವಾಗ ಆಂಟಿ-ರೌಡಿ ಸ್ಕ್ವಾಡ್ ಪೊಲೀಸರು ಮೂರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಹೀನ್ ಕೆ ಅಯುಬ್ (21), ಶಹನ್ ಬಶೀರ್ (20) ಮತ್ತು ಸಚಿನ್ ಪ್ರದೀಪನ್ (20) ಕೇರಳದವರು ಎಂದು ಗುರುತಿಸಲಾಗಿದೆ. ಆರ್ಎಸ್ಎಸ್ ಪೊಲೀಸರ ಪ್ರಕಾರ ಅಕ್ಟೋಬರ್ 23 ರಂದು ಆರ್ಯ ಸಮಾಜ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರುವ ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಇವರು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಅಪಾರ್ಟ್ಮೆಂಟನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ, ಒಂದು ಚೀಲದಲ್ಲಿ 12 ಪ್ಯಾಕೆಟ್ ಗಾಂಜಾ (400 ಗ್ರಾಂಗಳು) ಪತ್ತೆಯಾಗಿದೆ. ವಿಚಾರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದ ಕೇರಳದಿಂದ ಗಾಂಜಾವನ್ನು ಈಶ್ವರನ್ ಎಂಬ ವ್ಯಕ್ತಿಯು ಸರಬರಾಜು ಮಾಡಿತಿದ್ದು ಮತ್ತು ಅದನ್ನು ಬಲ್ಮಾಟ್ಟದಲ್ಲಿ ಸಾರ್ವಜನಿಕರಿಗೆ ಮತ್ತು ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದರು. ಪೊಲೀಸರು 400 ಗ್ರಾಂ ಗ್ಯಾಂಜವನ್ನು ಮತ್ತು 32,300 ರೂ ಮೌಲ್ಯದ 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡರು. ಆರೋಪಿಗಳನ್ನು ಮತ್ತ...

ಟಿಪ್ಪು ಮತಾಂಧನಾಗಿದ್ದರೆ ಪೂರ್ಣಯ್ಯ ದಿವಾನ ಆಗುತ್ತಿರಲಿಲ್ಲ: ಪಾಪು

Image
ಧಾರವಾಡ:  ಟಿಪ್ಪು ಸುಲ್ತಾನ ಮತಾಂಧನಾಗಿದ್ದರೆ, ತನ್ನ ಆಸ್ಥಾನಕ್ಕೆ ಪೂರ್ಣಯ್ಯನನ್ನು ಏಕೆ ದಿವಾನನನ್ನಾಗಿ ಮಾಡಿಕೊಳ್ಳುತ್ತಿದ್ದ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರಶ್ನಿಸಿದ್ದಾರೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಅವರು, ''ಶೃಂಗೇರಿಯ ಶಾರದಾ ಮಾತೆ ದೇಗುಲದ ಕೆಳಗೆ ದ್ರವ್ಯ ಇದೆ ಎನ್ನುವ ಹುಚ್ಚು ಭಾವನೆಯಿಂದ ಪೇಶ್ವೆಗಳು ಅದನ್ನು ಕೆಡವಿ ಹಾಕಿದರು. ಶೃಂಗೇರಿಯ ಜಗದ್ಗುರು ಕೆಳದಿ ರಾಜ್ಯವಾದ ಮಂಗಳೂರಿಗೆ ಓಡಿ ಹೋಗಿದ್ದರು. ಟಿಪ್ಪು ಸುಲ್ತಾನನು ಮತಾಂಧನಾಗಿದ್ದರೆ, ಶಾರದಾ ಮಾತೆಯ ದೇವಾಲಯವನ್ನು ಪುನಃ ಕಟ್ಟಿ ಶಾರದಾ ಮಾತೆಯ ವಿಗ್ರಹವನ್ನು ಅಲ್ಲಿ ಏಕೆ ಮತ್ತೆ ಸ್ಥಾಪಿಸುತ್ತಿದ್ದರು, ಕೆಳದಿ ರಾಜ್ಯಕ್ಕೆ ಓಡಿ ಹೋಗಿದ್ದ ಶೃಂಗೇರಿಯ ಜಗದ್ಗುರುಗಳನ್ನು ಮತ್ತೆ ಶೃಂಗೇರಿಗೆ ಕರೆಸಿಕೊಂಡು ಅವರನ್ನು ಮತ್ತೆ ಪೀಠದ ಮೇಲೆ ಏಕೆ ಕೂರಿಸುತ್ತಿದ್ದ,'' ಎಂದು ಪ್ರಶ್ನಿಸಿದ್ದಾರೆ. ಕಾಗಕ್ಕ-ಗುಬ್ಬಕ್ಕ ಕಥೆ: ''ಟಿಪ್ಪು ಸುಲ್ತಾನನು ಶೃಂಗೇರಿ ಮಠಕ್ಕೆ ಏನೇನು ಕೊಟ್ಟಿರುವನೆಂದು 37 ತಾಮ್ರ ಪತ್ರಗಳಲ್ಲಿ ಮಾಹಿತಿ ಸಿಕ್ಕಿವೆ. ಏನಾದರೂ ಕಾಗವ್ವ-ಗುಬ್ಬವ್ವ ಕಥೆಯನ್ನು ಹೇಳಿದರೆ ಜನರು ನಂಬುತ್ತಾರೆಂದು ಚಿದಾನಂದ ಮೂರ್ತಿಯಂಥವರು ಇಲ್ಲದ ಕಥೆ ಸೃಷ್ಟಿಸಿ ಟಿಪ್ಪು ಹೆಸರಿಗೆ ಕಳಂಕ ತರುವ ಕೆಲಸ ಮಾಡಲು ಹೊರಟ್ಟಿದ್ದಾರೆ,'' ಎಂದು ಆರೋಪಿಸಿದ್ದಾರೆ. ''ಟಿಪ್ಪು ಸುಲ್ತಾನನ ಅಂತ್ಯಕ್ರಿಯೆ ನಡೆದಾಗ ಅ...