ಮಂಗಳೂರು : ಪವಿತ್ರ ರಂಝಾನ್ ತಿಂಗಳಲ್ಲಿ ಒಂದು ತಿಂಗಳು ಉಪವಾಸ ವೃತವನ್ನು ಆಚರಿಸಿ ಇಂದು ಈದುಲ್ ಫಿತ್ರ್ ಹಬ್ಬವನ್ನು ಆಚರಿಸುತ್ತಿರುವ ಸರ್ವ ಮುಸ್ಲಿಂ ಬಾಂಧವರಿಗೆ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಲುಕ್ಮಾನ್ ರವರು ಶುಭ ಹಾರೈಯಿಸಿದ್ದಾರೆ
ಈ ಹಬ್ಬದ ಮುಖಾಂತರ ನಾಡಿನಾದ್ಯಂತ ಎಲ್ಲಾ ಜಾತಿ ಮತ್ತು ಧರ್ಮಗಳ ಅನುಯಾಯಿಗಳಲ್ಲಿ ಸುಖ,ಸಂತೋಷ,ಐಕ್ಯತೆ ಮತ್ತು ಸೌಹಾರ್ದತೆ ಬೆಳೆಯಲಿ
ಎಂದು ಲುಕ್ಮಾನ್ ಆಶಿಸಿದರು.
ಉಪ್ಪಿನಂಗಡಿ: ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರು ನಿನ್ನೆ ಕುಂತೂರು ಜುಮಾ ಮಸೀದಿಯಲ್ಲಿ ಏರ್ಪಡಿಸಿದಂತಹ ಇಫ್ತಾರ್ ಕೂಟದಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಲುಕ್ಮಾನ್ ಮತ್ತು ನೂರಾರು ಉಪವಾಸಿಗರು ಪಾಳ್ಗೊಂಡಿದ್ದರು. ಈ ಸಂಧರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಅಖ್ತರ್, ಸುಳ್ಯ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾದ ಶಾಫಿ, ಮುನಾವರ್, ಸಫ್ವಾನ್, ಶಾಫಿ ಕೈಕಂಬ, ನದೀಂ, ಆದಿಲ್ ಹಾಗೂ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ನ ಸಕ್ರೀಯ ಕಾರ್ಯಕರ್ತರಾಗಿರುವ ಮುತ್ತಲಿ ಕುಂತೂರು, ನವಲ್ ಉಪ್ಪಿನಂಗಡಿ ಮತ್ತು ಚಮ್ಮಿ ಉಪ್ಪಿನಂಗಡಿ ಆಯೋಜಿಸಿದ್ದರು.
ಮಂಗಳೂರು : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಶಿಪಾಲ್ ರಾಜ್ ಮಂಗಳೂರು ಇವರು ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣ ಕಂಕನಾಡಿ ಬಳಿ ನಿರಾಶ್ರಿತ ಮಕ್ಕಳಿಗೆ ರಂಝಾನ್ ಪ್ರಯುಕ್ತ ತಿಂಡಿ ತಿನಿಸುಗಳನ್ನು ವಿತರಿಸುವುದರ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಶಿಪಾಲ್ ರಾಜ್ ಅವರೊಂದಿಗೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೈಲೇಶ್ ಕೊಟ್ಟಾರಿ ಮತ್ತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಪೂಜಾರಿ ಉಪಸ್ಥಿತರಿದ್ದರು.
ಗುರುದಾಸ್ ಪುರ: ಪಂಜಾಬ್ ರಾಜ್ಯದ ಗುರುದಾಸ್ ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು,ಆಡಳಿತಾರೂಢ ಕಾಂಗ್ರೆಸ್ ಜಯ ಕಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ 1,93,219 ಮತಗಳಿಂದ ಜಯ ಸಾಧಿಸಿದ್ದಾರೆ. ಜಖರ್ ಬಿಜೆಪಿ ಅಭ್ಯರ್ಥಿ ಸ್ವರನ್ ಸಲರಿಯಾ ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಸಂಸದ ಚಿತ್ರನಟ ವಿನೋದ್ ಖನ್ನಾ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು, ಆಪ್ 3 ನೇ ಸ್ಥಾನ ಪಡೆದುಕೊಂಡಿದೆ. 12 ಸುತ್ತುಗಳ ಮತ ಎಣಿಕೆ ನಂತರ ಎಲ್ಲಾ 9 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಸುನಿಲ್ ಜಖರ್ , ಭಾರೀ ಮತಗಳಿಂದ ಗೆಲ್ಲಿಸಿದ ಮತದಾರರನ್ನು ಮತ್ತು ಬೆಂಬಲಿಸಿದ ಪಕ್ಷದ ಮುಖಂಡರಿಗೆ ಧನ್ಯವಾದ ಹೇಳಿದ್ದಾರೆ. ಈ ಗೆಲುವಿನಿಂದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ನಾಯಕತ್ವದ ಮೇಲೆ ಜನತೆಗೆ ನಂಬಿಕೆಯಿದೆ ಎಂಬುದು ಸಾಬೀತಾಗಿದೆ. ಇದು ಕಾಂಗ್ರೆಸ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಗೆಲುವು ಎಂದು ಜಖರ್ ಖುಷಿಯಿಂದ ಹೇಳಿಕೊಂಡಿದ್ದಾರೆ. ಪಂಜಾಬ್ನಾದ್ಯಂತ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾರೀ ಸಂಭ್ರಮಾಚಾರಣೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಕೇರಳದ ವೆಂಗರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತಾ ರೂಢ ಎಡಪಕ್ಷ ಮತ್ತು ಬಿಜೆಪಿ ಮುಖಭಂಗ ಅನುಭವ...
ಬೆಂಗಳೂರು: ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿಪಡೆಯುತ್ತಿದೆ, ದೇಶದ ಸ್ವಾತಂತ್ರ್ಯಕ್ಕೆ ಮೊದಲು ಹೋರಾಡಿದ್ದು ಟಿಪ್ಪು ಸುಲ್ತಾನ್ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಮಾಧ್ಯಮವೊಂದು ವರದಿ ಮಾಡಿದೆ. ಅ.15 ರಂದು ಅರಮನೆ ಮೈದಾನದಲ್ಲಿ ನಡೆದ ಪಿಎಫ್ಐ ಸಮಾವೇಶದಲ್ಲಿ ಮಾತನಾಡಿರುವ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ್ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ, ಟಿಪ್ಪು ಸುಲ್ತಾನ್ ಕೊಡುಗೆಯ ಬಗ್ಗೆ ಮಾತನಾಡುವ ಭರಾಟೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, "ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ಮಾಡಿದ್ದು ಟಿಪ್ಪು ಸುಲ್ತಾನ್ ಗಾಂಧಿ, ಸುಭಾಷ್ ಏನು ಮಾಡಿಲ್ಲ". ಎಂದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಟ ಮಾಡಿದ್ದು ಟಿಪ್ಪು ಸುಲ್ತಾನ್, ಸ್ವಾತಂತ್ರ್ಯಕ್ಕಾಗಿ ಟಿಪ್ಪು ತನ್ನ ಮಕ್ಕಳನ್ನು ಅಡವಿಟ್ಟಿದ್ದ, ಆದರೆ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರ ಮಕ್ಕಳನ್ನು ಅಡವಿಟ್ಟಿದ್ದರೆ? ಎಂದು ಪ್ರಶ್ನಿಸಿದ್ದು, ಟಿಪ್ಪು ಪ್ರತಿಮೆ ಕೆಂಪು ಕೋಟೆಯ ಮೇಲೆ ಇರಬೇಕಿತ್ತು ಎಂದು ಹೇಳಿದ್ದಾರೆ. ದೇಶದಲ್ಲಿ ದನಗಳಿಗೆ ಗೌರವ ಇದೆ, ಜನರಿಗೆ ಇಲ್ಲ. ಕೇಂದ್ರ ಸರ್ಕಾರ ದನಗಳ ಭಾರತ ಕಟ್ಟಲಿ, ನಾವು ಜನಗಳ ಭಾರತ ಕಟ್ಟುತ್ತೇವೆ ಎಂದು ಜ್ಞಾನ ಪ್ರಕಾಶ್ ಹೇಳಿದ್ದಾರೆ.
ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರಿನಾದ್ಯಂತ ಆರಂಭಿಸಿರುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದ್ದು, ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಸೋಮವಾರ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖಾದರ್ ಅವರು, ಮಂಗಳೂರಿನಲ್ಲಿ ಐದು, ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಒಂದು, ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು ಎಂದರು. ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್ ಆರಂಭಿಸಲಾಗುತ್ತಿದ್ದು, ಮಂಗಳೂರಿನಲ್ಲಿ ಪ್ರತ್ಯೇಕ ಅಡುಗೆ ಮನೆ ಇರುತ್ತದೆ. ಉಳಿದ ಕಡೆಗಳಲ್ಲಿ ಕ್ಯಾಂಟೀನ್ ಕಟ್ಟಡದಲ್ಲಿ ಅಡುಗೆ ಮನೆಯೂ ಇರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳು ಸೇರಿ 171 ಸ್ಥಳಗಳಲ್ಲಿ ಒಟ್ಟು 246 ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.
Comments
Post a Comment