ಜೀನ್ಸ್ ಧರಿಸಿದ್ದಕ್ಕೆ ಟ್ರೋಲ್‌ಗೆ ಗುರಿಯಾದ ಮಲಾಲ
ಬ್ರಿಟನ್ : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ತೆರಳಿರುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಮಲಾಲಾ ಯೂಸುಫ್‌ಝೈ ಅವರು ಜೀನ್ಸ್ ತೊಟ್ಟು, ಬೂಟು ಧರಿಸಿದ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಮಲಾಲ ಅವರು ಒಂದು ವಾರದ ಹಿಂದೆ ತತ್ವಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳ ಅಧ್ಯಯನ ಮಾಡಲು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ .
ಈ ವೇಳೆ ಮಲಾಲಾ ಅವರು ಜೀನ್ಸ್ , ಬಲು ಎತ್ತರದ ಬೂಟು ಹಾಗೂ ಬಾಂಬರ್ ಜಾಕೆಟ್ ಹಾಕಿಕೊಂಡು ನಡೆದು ಹೋಗುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಂದೊಮ್ಮೆ ಅವಳ ಹಣೆಗೆ ಗುಂಡೇಟು ತಗುಲಲು ಇದೇ ಕಾರಣ ಎಂದು ಮೊಹಮ್ಮದ್ ವಖಾಸ್ ಅವಾನ್ ಎಂಬುವರು ಟ್ವೀಟ್ ಮಾಡಿದ್ದಾರೆ.
ಮಲಾಲ ಅವರು ನಾಟಕದ ರಾಣಿ. ಇದನ್ನು ಆಕೆ ಅವರ ತಂದೆಯಿಂದ ಕಲಿತಿದ್ದಾಳೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ತಾಲಿಬಾನ್ ವಿರೋಧಿಸಲಿಲ್ಲ. ಆದರೆ ತಾಲಿಬಾನರಿಗೆ ಪಾಶ್ಚಾತ್ಯ ಸಂಸ್ಕೃತಿ ಬೇಕಾಗಿರಲಿಲ್ಲ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಮಲಾಲ ಅವರನ್ನು ಪಾಕಿಸ್ತಾನದ ರೂಪದರ್ಶಿ ಮಾಯಾ ಕಲೀಫಾ ಗೆ ಹೋಲಿಸಿದ್ದು, ಮಾಯಾ ಕಲೀಫಾ– 2 ಎಂದು ಕರೆದಿದ್ದಾರೆ.

Comments
Post a Comment