ಯುವರಾಜ್ ಸಿಂಗ್ ವಿರುದ್ಧ ಅತ್ತಿಗೆ ಆಕಾಂಕ್ಷಾರಿಂದ ಕೌಟುಂಬಿಕ ಹಿಂಸಾಚಾರ ಕೇಸ್


ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಖ್ಯಾತ ಆಲ್‌ ರೌಂಡರ್‌ ಯುವರಾಜ್‌ ಸಿಂಗ್‌, ಆತನ ತಾಯಿ ಶಬ್ನಂ ಸಿಂಗ್‌ ಮತ್ತು ಸಹೋದರ ಜೋರಾವರ್‌ ಸಿಂಗ್‌ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಾಗಿದೆ. 
ಯುವರಾಜ್ ಸಿಂಗ್ ಸಹೋದರ ಜೋರಾವರ್‌ ಪತ್ನಿ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್-10 ಸ್ಪರ್ಧಿ ಆಕಾಂಕ್ಷಾ ಶರ್ಮಾ ಬುಧವಾರ ಕೇಸ್ ದಾಖಲಿಸಿದ್ದು ಇದೇ ಅ.21ಕ್ಕೆ ನಿಗದಿಸಲಾಗಿದೆ. 
ಇನ್ನೂ ಈ ಕೇಸಿನ ಬಗ್ಗೆ  ಯಾವುದೇ ಹೇಳಿಕೆಯನ್ನು ನೀಡಲು ಆಕಾಂಕ್ಷಾ ನಿರಾಕರಿಸಿದ್ದಾರೆ. ಆದರೆ ಆಕೆಯ ವಕೀಲೆ ಸ್ವಾತಿ ಸಿಂಗ್‌, ಕೇಸು ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ. 
ಕೌಟುಂಬಿಕ ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಎಂದು ಅರ್ಥ ಅಲ್ಲ. ಅದು ಮಾನಸಿಕ ಮತ್ತು ಹಣಕಾಸು ಹಿಂಸೆಯನ್ನು ಕೂಡ ಒಳಗೊಂಡಿರುತ್ತದೆ. ಇದಕ್ಕೆ ಯುವರಾಜ್‌ ಸಿಂಗ್‌ ಕೂಡ ಸಾಥ್‌ ನೀಡಿದ್ದಾರೆ. ಜೋರಾವರ್‌ ಮತ್ತು ಆತನ ತಾಯಿ ನನ್ನ ಕಕ್ಷಿದಾರಳಿಗೆ ಹಿಂಸೆ ನೀಡಿದ್ದಾರೆ ಎಂದು ಸ್ವಾತಿ ಸಿಂಗ್ ತಿಳಿಸಿದ್ದಾರೆ. 

Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್