ಭಾರತೀಯ ಮೂಲದ ಯುವಕ ಈಗ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್


ಲಂಡನ್: ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ.
ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ ಅವರು ಒಂದು ವರ್ಷಗಳ ಹಿಂದೆ ತನ್ನ ಶಾಲಾ ಕೆಲಸದೊಂದಿಗೆ ಆನ್ ಲೈನ್ ರಿಯಲ್ ಎಸ್ಟೇಟ್ ಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ಹಲವು ಮನೆ, ಆಸ್ತಿಗಳ ಮಾರಾಟದ ಡೀಲ್ ಕುದಿರಿಸುತ್ತಿದ್ದ.
ಅಕ್ಷಯ್ ಸ್ಥಾಪಿಸಿದ "doorsteps.co.uk" ಸಂಸ್ಥೆ ಈಗ 12 ಮಿಲಿಯನ್ ಪೌಂಡ್ ಬೆಲೆ ಬಾಳುತ್ತಿದ್ದು, ಈ ಮೂಲಕ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಅಲ್ಲದೆ ಅಕ್ಷಯ್ ಅವರ "doorsteps.co.uk" ಆರಂಭವಾಗಿ 16 ತಿಂಗಳಲ್ಲಿ ಬ್ರಿಟನ್ ನ 18ನೇ ಅತಿ ದೊಡ್ಡ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ.
ತಾನು ಇದುವರೆಗೆ 100 ಮಿಲಿನಿಯನ್ ಪೌಂಡ್ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಿಸಿರುವುದಾಗಿ ಅಕ್ಷಯ್ ಹೇಳಿಕೊಂಡಿದ್ದಾರೆ.
ತನ್ನ ಸಂಬಂಧಿಯೊಬ್ಬರಿಂದ ಕೇವಲ 7 ಸಾವಿರ ಪೌಂಡ್ ಸಾಲ ಪಡೆದು "doorsteps.co.uk" ಆರಂಭಿಸಿದ್ದ ಅಕ್ಷಯ್ ಈಗ 12 ಜನರಿಗೆ ಉದ್ಯೋಗ ನೀಡಿದ್ದಾರೆ.

Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್