ಪಿ.ವಿ.ಮೋಹನ್ ಮತ್ತು ಯುವ ಕಾಂಗ್ರೆಸ್ ಸದಸ್ಯರಿಂದ ಡಿಐಜಿ ಭೇಟಿ




ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಅಕ್ರಮ ಚಟುವಟಿಕೆಗಳು, ಡ್ರಗ್ಸ್ ಮಾಫಿಯ, ಸ್ಕೀಲ್ ಗೇಮ್, ಅನೈತಿಕವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಗಳಿಗೆ ಕಡಿವಾಣ ಹಾಕುವ ಮೂಲಕ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಯಾಗಿರುವ ಪಿ.ವಿ.ಮೋಹನ್ ರವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷರಾದ ಬಲರಾಜ್ ರೈ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಲುಕ್ಮಾನ್, ಸುಮಿತ್ ಡಿಸೋಜ ಮತ್ತು ಯುವ ಕಾಂಗ್ರೆಸ್ನ ಸದಸ್ಯರು ಪಶ್ಚಿಮ ಐಜಿಪಿ ಹೇಮಂತ್ ನಿಂಬಾಳ್ಕರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಿ.ವಿ ಮೋಹನ್ ರವರು ಗಾಂಜಾ ದಂಧೆ, ಸ್ಕೀಲ್ ಗೇಮ್, ಮಸಾಜ್ ಪಾರ್ಲರ್ ಗಳಿಂದಾಗಿ ಜಿಲ್ಲೆಯ ಯುವಕರು, ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ  ನಾರ್ಕೋಟಿಕ್ಸ್ ಸೆಲ್ ಅನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗದಂತೆ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ನಿಯೋಗವು ನೀಡಿದ ಸಲಹೆಗಳಿಗೆ ಐಜಿಪಿಯವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಿ.ವಿ ಮೋಹನ್ ರಾಜ್ಯಾದ್ಯಂತ ಕಾಂಗ್ರೆಸ್ ಅಲೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕಂಗೆಟ್ಟಿರುವ ಬಿ.ಜೆ.ಪಿ ಪಕ್ಷವು  ದ.ಕ ಜಿಲ್ಲೆಯಲ್ಲಿ ಕೋಮು ದಳ್ಳುರಿಯನ್ನು ಹಚ್ಚುವುದರ ಮೂಲಕ ಜಿಲ್ಲೆಯ ಶಾಂತಿ ಮತ್ತು ಸಾಮರಸ್ಯವನ್ನು ಕದಡುವಂತಹ ಕೆಲಸ ಮಾಡುತ್ತಿದೆ. ಅಮಾಯಕರ ಮೇಲೆ ಹಲ್ಲೆ, ಉದ್ರೇಕಕಾರಿ ಭಾಷಣ ಮಾಡುವುದರ ಮೂಲಕ ಕೋಮುಗಲಭೆಗೆ ಕಿಡಿ ಹಚ್ಚುವ ಪ್ರಯತ್ನ ಮಾಡಿದರೂ ಜಿಲ್ಲೆಯ ಜನತೆ  ಶಾಂತಿ ಕಾಪಾಡುವ ಮೂಲಕ ಕೋಮುಗಲಭೆಗೆ ಆಸ್ಪದ ನೀಡದಿರುವುದರಿಂದ ಮತ್ತು ತಮ್ಮ ಮಂಗಳೂರು ಚಲೋ ಕಾರ್ಯಕ್ರಮವು ಠುಸ್ ಆಗಿರುವುದರಿಂದ ಅದಲ್ಲದೆ ಮಂಗಳೂರಿಗೆ ಆಗಮಿಸ ಬೇಕಾಗಿದ್ದಂತಹ ಅಮಿತ್ ಶಾ ಜಿಲ್ಲೆಯ ಜನರ ಸೌಹಾರ್ದತೆಯನ್ನು ಕಂಡು ಬಂದ ದಾರಿಗೆ ಸುಂಕ ಇಲ್ಲ ಎಂದು ಹಿಂತಿರುಗಿ ಹೋಗಿದ್ದಾರೆ ಇದೆಲ್ಲದರಿಂದ ಕಂಗೆಟ್ಟಿರುವಂತಹ ಬಿ.ಜೆ.ಪಿ ಯವರು ಸುಮ್ಮನೆ ರಾಜ್ಯ ಸರಕಾರದ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ.

ದ.ಕ ಜಿಲ್ಲೆಯಲ್ಲಿ ಡ್ರಗ್ಸ್ ಟ್ರಾಫಿಕಿಂಗ್ ಬಹಳ ಹಿಂದಿನಿಂದಲೆ ಇದೆ. ಇತ್ತೀಚಿನ ಕೊಲೆ ಪ್ರಕರಣಗಳಲ್ಲಿ ಡ್ರಗ್ಸ್ ಮಾಫಿಯಾದ ಕರಿ ನೆರಳು ಕಾಡುತ್ತಿದ್ದು ಅದಕ್ಕಾಗಿ ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವನ್ನು ಬಿ.ಜೆ.ಪಿ ಯವರು ದೂರುವ ಬದಲು ಬಿ.ಜೆ.ಪಿ ಸರಕಾರ ಇದ್ದಂತಹ ಸಂದರ್ಭದಲ್ಲಿ ಸ್ನೇಹ ಎಂಬ ಹುಡುಗಿಯು ಮಾಧಕ ವ್ಯಸನಕ್ಕೆ  ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬುವುದನ್ನು ಮರೆಯದೆ ಇಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲಾ ಪಕ್ಷದವರು ಸೇರಿ ಇದರ ವಿರುದ್ದ ಹೋರಾಟ ಮಾಡಬೇಕಾಗಿದೆ ಅದು ಬಿಟ್ಟು ಜಿಲ್ಲೆಯ ಸಂಸದರು ಅವರ ಶೋಭೆಗೆ ತರವಲ್ಲದ ಮಾತುಗಳನ್ನಾಡುತ್ತ ಜಿಲ್ಲೆಯ ಸಾಮರಸ್ಯವನ್ನು ಕದಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದನ್ನು ಕಾಂಗ್ರೆಸ್ ಪಕ್ಷವು ಖಂಡಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿಫಲ್ ರಾಜ್ , ನವೀದ್ ಅಖ್ತರ್ ,ಸೌಹಾನ್ ಕಾರ್ಯದರ್ಶಿಗಳಾದ ಶೈಲೇಶ್ ಕೊಟ್ಟಾರಿ, ಸಾದುದ್ದೀನ್ ,ಆವ್ಲನ್ , ಎಕೆಎಂ ಮುಸ್ತಫ, ಕಾರ್ತಿಕ್ ರಾಜ್ , ಇಂಟಕ್ ಯುವ ಘಟಕದ ಅಧ್ಯಕ್ಷರಾದ ದೀಕ್ಷಿತ್ ಶೆಟ್ಟಿ ಮತ್ತು ಯುವ ಕಾಂಗ್ರೆಸ್ನ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.


Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್