ನೋಟ್ ಬುಕ್‌ನಲ್ಲಿ ಶಾಸಕರ ಪೋಟೊ: ಬಿಜೆಪಿ ಪ್ರತಿಭಟನೆ

ಮಂಗಳೂರು: ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾ ಅವರ ಭಾವಚಿತ್ರ ಇರುವ ನೋಟ್ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಿರುವುದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿ ಎದುರು ಬಿಜೆಪಿಪ್ರತಿಭಟನೆ ನಡೆಸಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾನಾ ಯೋಜನೆ ರೂಪಿಸಿವೆ. ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ದೇಶದ ಪ್ರಧಾನಿ ಮತ್ತು ರಾಷ್ಟ್ರಪತಿ ಹೊರತುಪಡಿಸಿ ಯಾರೂ ತಮ್ಮ ಭಾವಚಿತ್ರಗಳನ್ನು ಹಾಕಿಕೊಳ್ಳುವಂತಿಲ್ಲ. ಶಾಸಕರು ಸ್ವಂತ ಖರ್ಚಿನಲ್ಲಿ ಪುಸ್ತಕ ನೀಡಿದ್ದರೂ ಭಾವಚಿತ್ರ ಪ್ರಕಟಿಸಿರುವುದು ಕಾನೂನು ಬಾಹಿರ. ಆದ್ದರಿಂದ ಅವರು ಕೊಟ್ಟಿರುವ ಪುಸ್ತಕ ಹಿಂಪಡೆಯಬೇಕು. ಯಾವುದೇ ಭಾವಚಿತ್ರ ಇಲ್ಲದೆ ಮತ್ತೆ ಅವರು ಪುಸ್ತಕ ನೀಡಿದಲ್ಲಿ ಸ್ವಾಗತಿಸಲಾಗುವುದು ಎಂದರು.

ಬಿಜೆಪಿ ನಾಯಕರಾದ ಗಣೇಶ್ ಹೊಸಬೆಟ್ಟು, ಜನಾರ್ದನ ಗೌಡ, ಡಾ.ವೈ.ಭರತ್ ಶೆಟ್ಟಿ, ಪೂಜಾ ಪೈ, ವೆಂಕಟ್ ವಳಲಂಬೆ, ಸತ್ಯ ಜಿತ್ ಸುರತ್ಕಲ್, ತಿಲಕ್ ರಾಜ್, ರುಕ್ಮಯ ನಾಯಕ್, ಜಿತೇಂದ್ರ ಕೊಟ್ಟಾರಿ, ರಾಮ ಅಮೀನ್, ಪ್ರಕಾಶ್ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು

Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್