ಕಲ್ಲಡ್ಕದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾನ
ಕಲ್ಲಡ್ಕ ಪೇಟೆಯಲ್ಲಿ ಮೊನ್ನೆ ತಾನೇ ಕೋಮುಗಲಭೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಕೋಮುವಾದಿ ಸಂಘಟನೆಗಳ ಸದಸ್ಯರು ಕಲ್ಲಡ್ಕ ನಿವಾಸಿ ಖಲೀಲ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇದನ್ನು ಪ್ರಶ್ನಿಸಲು ಹೊರಟ ಮುಸ್ಲಿಮ್ ಯುವಕರು ಮತ್ತು ಹಿಂದೂ ಯುವಕರ ನಡುವೆ ಮಾರಾಮಾರಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾನವಾಯಿತು. ಇದೇ ಸಂಧರ್ಭದಲ್ಲಿ ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿರುವ ಕೆಲವು ಕಿಡಿಗೇಡಿಗಳು ಕಲ್ಲಡ್ಕ ರಾಮಮಂದಿರದ ಮೇಲೆ ನಿಂತು ಕಲ್ಲಡ್ಕ ಮಸೀದಿಗೆ ಕಲ್ಲೆಸೆತ ನಡೆಸಿದ್ದಾರೆಂದು ತಿಳಿದು ಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ತಲುಪಿದ್ದು ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
Comments
Post a Comment